ಜಾನಪದ ಸಂಪತ್ತನ್ನು ತನ್ನ ಅದ್ಭುತ ಸ್ಮರಣಶಕ್ತಿಯಲ್ಲಿ ಸಂಗ್ರಹಿಸಿಟ್ಟಿದ್ದ ಅಪರೂಪದ ಪ್ರತಿಭೆಯೇ ನಾಡೋಜ ಶ್ರೀಮತಿ ಸಿರಿಯಜ್ಜಿ.
ಅಕ್ಷರಜ್ಞಾನವಿಲ್ಲದಿದ್ದರೂ ಸಾವಿರಾರು ಜನಪದ ಪದಗಳನ್ನು ನೆನಪಿನಲ್ಲಿಟ್ಟುಕೊಂಡು ನಿರರ್ಗಳವಾಗಿ ಹಾಡುತ್ತಿದ್ದ ಸಿರಿಯಜ್ಜಿ “ಜನಪದ ಸಿರಿ”, “ಜನಪದ ಕಣಜ”, “ಜಾನಪದ ಕೋಗಿಲೆ” ಮತ್ತು “ನಡೆದಾಡುವ ಜಾನಪದ ವಿಶ್ವಕೋಶ” ಎಂದೇ ಖ್ಯಾತರಾದರು.