ಬ್ರಹ್ಮಗಿರಿ (ಅಶೋಕ ಸಿದ್ದಾಪುರ)

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಬ್ರಹ್ಮಗಿರಿ ಪರಿಸರ ಮೌರ್ಯ ಸಾಮ್ರಾಜ್ಯದ ಆಡಳಿತ ಕೇಂದ್ರವಾಗಿತ್ತೆಂದು ಅಶೋಕನ ಶಾಸನಗಳಿಂದ ತಿಳಿದು ಬಂದಿದೆ. ಸನ್ನತಿ ಹಾಗೂ ಚಂದ್ರವಳ್ಳಿಗಳಂತೆ ಬ್ರಹ್ಮಗಿರಿ ಸಹಾ ಹರಳುಶಿಲಾ ಪ್ರದೇಶದ ಪ್ರಮುಖ ನೆಲೆಯೆಂದು ಗುರುತಿಸಲ್ಪಟ್ಟಿರುವುದರಿಂದ, ಈ ಕಲ್ಲುಗಳಿಂದ ತಯಾರಿಸಲಾದ ಬೆಲೆಯುಳ್ಳ ಮಣಿಗಳು ಸಹಜವಾಗಿಯೇ ಇತರ ಭಾಗಗಳಿಗೆ, ರೋಮ್ ನಂತಹ ಇತರೆ ದೇಶಗಳಿಗೆ ಸರಬರಾಜಾಗುತ್ತಿದ್ದವು. ಸನ್ನತಿ, ಬನವಾಸಿ, ವಡಗಾಂವ್, ಮಾಧವಪುರ, ಮೊದಲಾದೆಡೆಗಳಲ್ಲಿ ಕಂಡು ಬರುವ ಇಟ್ಟಿಗೆ ಕಟ್ಟಡಗಳ ಅವಶೇಷವಿದ್ದು, ಇದು ಇಸಿಲಪಟ್ಟಣದ ವ್ಯಾಪ್ತಿಯಲ್ಲಿ ಕಂಡು ಬಂದಿರುವ ಏಕೈಕ ವಾಸ್ತುರಚನೆ ಎನ್ನಲಾಗಿದೆ.
(ಆಧಾರ: “ಮೌರ್ಯ ಮತ್ತು ಶಾತವಾಹನರ ಯುಗ” – ಲಕ್ಷ್ಮಣ ತೆಲಗಾವಿ) |