TOURISM OF CHITRADURGA
ದಿನಾಂಕ:
 

ಸೂಜಿಗಲ್ಲು ಮೈಲಾರ ಕ್ಷೇತ್ರ

 

ಕರ್ನಾಟಕದ ಕೆಲವೇ ಮೈಲಾರನ ಆರಾಧನೆಯು ಕೇಂದ್ರಗಳಲ್ಲಿ ಹೊಸದುರ್ಗ ತಾಲ್ಲೂಕಿನ ಸೂಜಿಕಲ್ಲು {ಮೈಲಾರ ಕ್ಷೇತ್ರ{ವೂ ಒಂದು. ಬೂದಿಹಾಳು (ಶ್ರೀರಾಂಪುರ) ಮತ್ತು ಬೆಲಗೂರು ಮಧ್ಯದಲ್ಲಿ {ಸೂಜಿಗಲ್ಲು ಮೈಲಾರ{ವಿದೆ. ಇದೊಂದು ಬೆಟ್ಟದಲ್ಲಿ ಆವರಿಸಿರುವ ಪ್ರಾಚೀನ ಕ್ಷೇತ್ರವಾಗಿದೆ. ಈ ಕ್ಷೇತ್ರವು ಸೂಜಿಗಲ್ಲು ಗ್ರಾಮದ ಹತ್ತಿರವಿರುವುದಾಗಿ ಇದಕ್ಕೆ ಈ ಹೆಸರು.

 

        ಬೆಟ್ಟದ ಮಧ್ಞದಲ್ಲಿರುವ ಗುಹಾಂತರ ದೇವಾಲಯದಲ್ಲಿ ಶ್ರೀ ಮೈಲಾರಲಿಂಗೇಶ್ವರ ಮತ್ತು ಗಂಗಮಾಳಮ್ಮ ಮತ್ತಿತರ ವಿಗ್ರಹಗಳೂ ಹಾಗೂ ಶ್ರೀಮೈಲಾರದೇವರ ಲಿಂಗವಿದೆ. ಶ್ರೀಮೈಲಾರ-ಗಂಗಮಾಳಮ್ಮನ ಉತ್ಸವ ಮೂರ್ತಿಗಳು ಸಹ ಇಲ್ಲಿವೆ. ಈ ಕ್ಷೇತ್ರವು ಬೆಟ್ಟದ ಬುಡದಲ್ಲಿರುವ ಮಹಾದ್ವಾರಗಳು, ಮಂಟಪಗಳು, ಉಯ್ಯಾಲೆ ಕಂಬಗಳು, ದೀಪಸ್ತಂಬ, ಶ್ರೀ ನೀಲಕಂಠೇಶ್ವರಸ್ವಾಮಿ ದೇವಾಲಯ, ಜುಂಜಪ್ಪನ ಗುಡಿ, ಶ್ರೀ ದೊಡ್ಡಬಿಲ್ಲು ಚೌಡಮ್ಮನ ಗುಡಿ, ತೇರುಬೀದಿ ಜಾತ್ರಾ ಬಯಲು, ಬೆಟ್ಟದ ಹಿನ್ನೆಲೆಞ ದೃಶ್ಯ ನಯನ ಮನೋಹರವಾಗಿದೆ.

 

        ಹೊಸದುರ್ಗ ತಾಲ್ಲೂಕಿನ ಕೆಲವೇ ಕೆಲವು ದೊಡ್ಡ ಜಾತ್ರೆಗಳಲ್ಲಿ ಒಂದಾಗಿರುವ ಸೂಜಿಕಲ್ಲು ಮೈಲಾರದ ಜಾತ್ರೆಗೆ, ಸುತ್ತಲ ನೂರಾರು ಗ್ರಾಮಗಳಿಂದ ಸಾವಿರಾರು ಭಕ್ತರು ಸೇರುತ್ತಾರೆ. (ಕೆಲವು ಗ್ರಾಮದ ದೇವರುಗಳು ಆಗಮಿಸುವುದುಂಟು). ವರ್ಷಕ್ಕೊಮ್ಮೆ ಇಲ್ಲಿ ಜರುಗುವ ಅಂಬನೋತ್ಸವ, ಸರಪಳಿ ಪವಾಡ, ಶಸ್ತ್ರ ಪವ, ಬಗನ ಪವಾಡಗಳು ಹೆಸರುವಾಸಿ.

 

ಬೂದಿಹಾಳು ಪಾಳೆಯಗಾರರ "ಗೊಲ್ಲ ಸಿರುಮ"ನ ಸೇವೆ

        ಬೂದಿಹಾಳು ಕೋಟೆಯನ್ನು ಆಳಿದ ಪಾಳೆಯಗಾರ ಗೊಲ್ಲ ಸಿರುಮನು ಬೂದಿಹಾಳು ಕೋಟೆಯನ್ನು ನಿರ್ಮಿಸುವುದಕ್ಕೆ ಮೊದಲು ಸೂಜಿಕಲ್ಲು ದುರ್ಗದಲ್ಲಿದ್ದನು. ಸಿರುಮನ ಆರಾಧ್ಞ ದೈವಗಳಲ್ಲಿ ಮೈಲಾರ ದೇವರು ಸಹ ಒಂದಾಗಿದ್ದು, ಮೈಲಾರ ದೇವರ ಪ್ರಸಾದದಿಂದ ಈ ಪಾಳೆಯಗಾರನಿಗೆ ಶೂರ ಮಗನಾದ ಕುಮಾರಮಲ್ಲನು ಜನಿಸಿದನೆಂದು ಈ ಪಾಳೆಯಗಾರನು ಸೂಜಿಕಲ್ಲು ಮೈಲಾರ ಕ್ಷೇತ್ರ ದೇವಾಲಯಗಳನ್ನು ಮಹಾದ್ವಾರ ಮಂಟಪಾದಿ ನಿರ್ಮಾಣದೊಂದಿಗೆ ಜೀರ್ಣೋದ್ಧಾರಗೊಳಿಸಿದನು. ಸಿರುಮನು ಸಾಂಗತ್ಯದಲ್ಲಿಯೂ ಸೂಜಿಕಲ್ಲು ಮೈಲಾರ ದೇವರನ್ನು {ಕರಿಮುಖದ ಮೈಲಾರ{ ಎಂದು ಸ್ತುತಿಸಲಾಗಿದೆ. ಅಷ್ಟೆ ಅಲ್ಲದೇ ಚಿತ್ರದುರ್ಗ ಸಂಸ್ಥಾನದ ಕಾಮಗೇತಿ ಅರಸು ಮನೆತನದ ತಿಮ್ಮಪ್ಪನ ಮಗನು ಮೈಲಾರ ದೇವರಿಗೆ ಹೊಸದುರ್ಗ ತಾಲ್ಲೂಕಿನ ಹೊನ್ನೇಕೆರೆ ಸಮೀಪದ ರಂಗಾಪುರ ಗ್ರಾಮವನ್ನು ಉಂಬಳಿ ಕೊಟ್ಟಿದ್ದ ಬಗ್ಗೆ ಹೊಸದುರ್ಗ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮುಂದಿರುವ ಕಲ್ಲು ಬರಹದಿಂದ ತಿಳಿದು ಬಂದಿದೆ.


(ಆಧಾರ: ಹೊಸದುರ್ಗ ಸೀಮೆ ಜನಾಪದ ಬಾಗೂರು ನಾಗರಾಜಪ್ಪ)

.....

© 2011 www.chitharadurga.com. Best fit for 1024 X 768 Resolution.