A First Kannada Website of Chitradurga District....... ಕನ್ನಡ ರಾಜ್ಯೋತ್ಸವ ಶುಭಾಷಯಗಳು......  www.chitharadurga.com

ಪ್ರೇಕ್ಷಣೀಯ ಸ್ಥಳಗಳು

ಮುಖಪುಟ ಇತಿಹಾಸ ಪ್ರೇಕ್ಷಣೀಯ ಸ್ಥಳಗಳು ಪ್ರಾತಃಸ್ಮರಣೀಯರು ಸಾಹಿತ್ಯ ಜನಪದ ಕಲೆ ಛಾಯಾಗ್ರಹಣ ನಮ್ಮ ಬಗ್ಗೆ
 
ಪ್ರೇಕ್ಷಣೀಯ ಸ್ಥಳಗಳು
ಹಿರಿಯೂರು ತಾಲ್ಲೂಕು
ವಾಣಿ ವಿಲಾಸ ಸಾಗರ
ಆದಿವಾಲ
ಐಮಂಗಲ
ನಂದಿಹಳ್ಳಿ
ತೇರುಮಲ್ಲೇಶಸ್ವಾಮಿ ಗುಡಿ
ಯಲ್ಲದಕೆರೆ
*******
ಚಳ್ಳಕೆರೆ ತಾಲ್ಲೂಕು
ಚಿತ್ರದುರ್ಗ ತಾಲ್ಲೂಕು
ಹೊಳಲ್ಕೆರೆ ತಾಲ್ಲೂಕು
ಹೊಸದುರ್ಗ ತಾಲ್ಲೂಕು
ಮೊಳಕಾಲ್ಮೂರು ತಾಲ್ಲೂಕು

             

ವಾಣಿವಿಲಾಸ ಸಾಗರ

ಹಿರಿಯೂರು ಕಡಿಮೆ ಮಳೆ ಬೀಳುವ ಪ್ರದೇಶವಾದ್ದರಿಂದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ತಾಯಿಯವರಾದ ಶ್ರೀಮತಿ ಕೆಂಪನಂಜಮ್ಮಣಿ ವಾಣಿವಿಲಾಸ ರವರು ಇಲ್ಲಿಯ ಆಡಳಿತ ನೋಡಿಕೊಳ್ಳುತ್ತಿದ್ದಾಗ, ಈ ಪ್ರದೇಶಕ್ಕೆ ನೀರಾವರಿ ವ್ಯವಸ್ಥೆ ಮಾಡುವ ಉದ್ದೇಶದಿಂದ "ಮಾರಿಕಣಿವೆ" ಎನ್ನುವ ಎರಡು ಗುಡ್ಡಗಳ ಮಧ್ಯೆ ಹರಿವ ವೇದಾವತಿ ನದಿಗೆ ಅಣೆಕಟ್ಟು ಕಟ್ಟಿದ್ದರಿಂದ ಇದಕ್ಕೆ "ವಾಣಿವಿಲಾಸ ಸಾಗರ" ಎಂದೂ, ಗ್ರಾಮ್ಕಕ್ಕೆ "ವಾಣಿವಿಲಾಸಪುರ" ಎಂದು ನಾಮಕರಣ ಮಾಡಿದರು.

ಈ ಕಣಿವೆಯಲ್ಲಿ ಮಾರಿ ನೆಲಸಿದ್ದರಿಂದ ಹಳೆಯ ಕಾಲದ ಮಾರಿಕಣಿವೆ ಎಂತಲೂ ಕರೆಯುತ್ತಾರೆ. ಮಾರಮ್ಮನ ಹಳೆಯ ಕಾಲದ ದೇವಾಲಯದ ಹಿಂದೆ ಅಣಿಕಟ್ಟು ಕಟ್ಟಿದ್ದಾರೆ. ಅಣೆಕಟ್ಟಿಗೆ ಹೋಗುವ ಮೊದಲು ಇಲ್ಲಿ ದೇವಾಲಯವು ಸಿಗುತ್ತದೆ. ಇಲ್ಲಿಯ ದೇವಿ ವೈಶಿಷ್ಟ್ಯ ಏನೆಂದರೆ: ದೇವಿ ಅಣೆಕಟ್ಟು ಒಡೆಯದಂತೆ ಕಾಲುಚಾಚಿ ಅಣೆಕಟ್ಟೆಯ ಕಡೆಗೆ ಮುಖ ಮಾಡಿರುವುದರಿಂದ ಗರ್ಭಗುಡಿಯಲ್ಲಿ ದೇವಿಯ ಬೆನ್ನು ಕಾಣುತ್ತದೆ.

 ನಿರ್ಮಾಣ :

ಕ್ರಿ.ಶ.1898 ರಲ್ಲಿ ಈ ಅಣೆಕಟ್ಟು ಕಟ್ಟಲು ಪ್ರಾರಂಭವಾಗಿ 9 ವರ್ಷಗಳ ನಂತರ 1902 ರಲ್ಲಿ ನಿರ್ಮಾಣ ಕಾರ್ಯ ಮುಗಿಯಿತು. ಮೊದಲು ಶ್ರೀ ಕೃಷ್ನರಾಜ ಸಮುದ್ರವೆಂದು ಹೆಸರಿಟ್ಟರು. ನಂತರ "ವಾಣಿವಿಲಾಸ ಸಾಗರ" ಎಂದು ಹೆಸರಾಯಿತು. ಈ ಸಾಗರದ ುದ್ದ 1330 ಅಡಿ, ತಳಪಾಯದ ಅಗಲ 150 ಅಡಿ, ಎತ್ತರ 172 ಅಡಿಗಳು. ನೀರಿನ ಪರಮಾಧಿಯ ಮಟ್ಟ 135 ಅಡಿಗಳು. ಜಲಯಾನ ಪ್ರದೇಶ 600 ಚದರ ಮ್ಐಲಿ. 21645 ಎಕರೆ ಪ್ರದೇಶದಲ್ಲಿ ನೀರು ನಿಲ್ಲುತ್ತದೆ. ನೀರು ನಿಂತ ನಂತರ 14 ಮೈಲಿ ದೂರದ ಹೊಸದುರ್ಗದವರೆಗೆ ನಿಲ್ಲುತ್ತದೆ.

 ಪ್ರವಾಸಿ ಕೇಂದ್ರವಾಗಿ:

ಆಹ್ಲಾದಕರ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಈ ಪ್ರದೇಶದಲ್ಲಿ ಪ್ರವಾಸಿಗರಿಗೆಂದೇ ವಿಶೇಷ ತೆಪ್ಪ-ಬೋಟುಗಳ ವ್ಯವಸ್ಥೆ ಇದೆ. ಅಣೆಕಟ್ಟೆಯನ್ನು ಪ್ರವೇಶಿಸುವ ಮೊದಲು ಒಂದು ಸುಂದರವಾದ ಉದ್ಯಾನವನವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿಯ ಮತ್ತೊಂದು ಗಮನಾರ್ಹ ವಿಶೇಷತೆ ಎಂದರೆ ಅಣೆಕಟ್ಟಿನ ಒಂದು ಕೆಂದ್ರದಿಂದ ವೀಕ್ಷಿಸಿದಾಗ ಭಾರತ ನಕ್ಷೆಯಾಕಾರಾದ ಪ್ರಕೃತಿ ವಿಸ್ಮಯವನ್ನು ಇಲ್ಲಿ ಕಾಣಬಹುದು.

© 2008 www.chitharadurga.com. Best fit for 1024 X 768 Resolution.

Created by Raghavendra.R & Bharatkumar.B.V.