TOURISM OF CHITRADURGA
ದಿನಾಂಕ:
 

ಯಲ್ಲದಕೆರೆ : 101 ಲಿಂಗದ ಈಶ್ವರ ದೇವಾಲಯ

       

ಹಿರಿಯೂರು–ಮೈಸುರು ಮಾರ್ಗದಲ್ಲಿ ಹಿರಿಯೂರಿನಿಂದ 22 ಕಿ.ಮೀ. ದೂರದಲ್ಲಿ ಬೆಟ್ಟ ಗುಡ್ಡಗಳಡಿ ತೆಂಗಿನ ತೋಟಗಳ ಮಧ್ಯೆ ಇರುವ ಸಣ್ಣ ಊರು ಈ ಯಲ್ಲದಕೆರೆ ಗ್ರಾಮ. ಇಲ್ಲಿಯ ವಿಶೇಷವೆಂದರೆ ಇಲ್ಲಿಯ ಪುರಾತನ ಈಶ್ವರ ದೇವಾಲಯ. ಮುಖ್ಯರಸ್ತೆಯಿಂದ ಪಶ್ಚಿಮದ ಕಡೆ ಮೂರು ಫರ್ಲಾಂಗ್ ದೂರದಲ್ಲಿ ಹಾಳು ಬಿದ್ದಿರುವ ವಿಸ್ತಾರವಾದ ಕಾಡುಕಲ್ಲಿನ ಪೌಳಿಯ ಮೆಟ್ಟಿಲುಗಳ ಮೂಲಕ ಸುಮಾರು ಹದಿನೈದು ಅಡಿ ಆಳದ ಕಲ್ಯಾಣಿಗೆ ಹೋಗಬಹುದು. ಈ ಕಲ್ಯಾಣಿ ಇದೂವರೆಗೂ ಬತ್ತಿಲ್ಲವಂತೆ! ಈ ಕಲ್ಯಾಣಿ ಹೊಂದಿದಂತೆ ಇರುವುದೇ ಪುಟ್ಟ ಈಶ್ವರ ದೇವಾಲಯ. ಒಂದೇ ಕಲ್ಲಿನಲ್ಲಿ ಕೆತ್ತಲಾಗಿರುವ 101 ಪುಟ್ಟ ಪುಟ್ಟ ಈಶ್ವರ ಲಿಂಗಗಳಿವೆ. ಮಧ್ಯ ೊಂದೂವರೆ ಅಡಿ ಎತ್ತರದ ದೊಡ್ಡಲಿಂಗವಿದೆ.

 

 

101 ಲಿಂಗದ ಈಶ್ವರ ದೇವಾಲಯದಿಂದ ಸ್ವಲ್ಪ ಎತ್ತರದಲ್ಲಿ ಪೌಳಿಗೆ ಹೊಂದಿದಂತೆ ಸಿದ್ದೇಶ್ವರನ ಗುಡಿಯೊಂದಿಗೆ. ವಿಶಾಲವಾದ ಸಭಾಮಂಟಪಕ್ಕೆ ಹೊಂದಿದಂತೆ ಗರ್ಭಗುಡಿ ಇದೆ. ಗರ್ಭಗುಡಿಯ ಭಾಗಿಲಲ್ಲಿ ಸೂರ್ಯ-ಚಂದ್ರರ ಸಂಕೇತವಿರುವ ಶಿಲಾಬಾಲಿಕೆಯರ ಶಿಲ್ಪಗಳಿವೆ. ಸಿದ್ದೇಶ್ವರನ ಪೀಠದ ಮೇಲೆ ಏಳು ಹೆಡೆಯ ಸರ್ಪ ವಿಗ್ರಹವಿದೆ. ದೇವರ ಮುಂದೆ ಒಂದು ತೂಗುದೀಪ, ಎರಡು ಹಳೆಯ ಗಂಟೆ. ಎರಡು ಕತ್ತಿ, ಮೂರು ತ್ರಿಶೂಲಗಳಿವೆ. ಇಲ್ಲಿಯ ಕಲ್ಯಾಣಿಯ ಸುತ್ತಮುತ್ತ ಪಾಳು ಬಿದ್ದಿರುವ ಮಂಟಪಗಳನ್ನು ಕಾಣಬಹುದು.

 

 

 

.....

© 2011 www.chitharadurga.com. Best fit for 1024 X 768 Resolution.