ಐಮಂಗಲದ ನೊಳಂಬರ ಕಾಲದ ಕಂಬದೇವನ ಗುಡಿ
ಚಿತ್ರದುರ್ಗ – ಹಿರಿಯೂರು ಮಧ್ಯೆ ಹೆದ್ದಾರಿಯಲ್ಲಿರುವ ಹೋಬಳಿ ಕೇಂದ್ರ ವೀರಶೈವ ಧರ್ಮಕ್ಕೆ ಸೇರಿದ 'ಐಯ್ಯ'ನ ಹೆಸರಿನಲ್ಲಿ ಕೋಟೆ ಕಟ್ಟಿದ್ದರಿಂದ 'ಐಯ್ಯಮಂಗಲ' ಎಂದು ಹೆಸರು ಬಂದಿತೆಂದು, ಐತಿಹಾಸಿಕ ಮಹತ್ವದ ಈ ಪ್ರದೇಶವನ್ನು ನೊಳಂಬರು ಆಳಿದ್ದರೆಂದು ಇಲ್ಲಿಯ ಕಂಬದೇವನ ಗುಡಿಯ ಶಾಸನ ಹೇಳುತ್ತದೆ.
ಹರತಿ ವಂಶದ ಕೋಟೆಕೆರೆ ಅಬ್ಬೆನಾಯಕನ ಮಕ್ಕಳಾದ ಕಾಮಯ್ಯನಾಯಕನ ನಂತರ ಕ್ರಿ.ಶ. 1382 ರಿಂದ ಈತನ ಸೋದರ ಬೊಂಮ್ಮೆನಾಯಕನು ಐಮಂಗಳದಲ್ಲಿ ಆಳಿದರೆಂದು, ಹರತಿ ಪಾಳೆಯಗಾರರು ತಮ್ಮನ್ನು ಹರತಿ-ಐಮಂಗಲ ನಾಯಕರೆಂದು ಕರೆದುಕೊಂಡರೆಂದು ಶಾಸನಗಳಿಂದ ತಿಳಿದು ಬರುತ್ತದೆ. ಅಂದಿನ ಕೋಟೆ ಕೊತ್ತಲಗಳ ಅವಶೇಷಗಳನ್ನು ಇಂದಿಗೂ ಕಾಣಬಹುದು.
ಶ್ರೀ ವೀರಭದ್ರಸ್ವಾಮಿ ದೇವಾಲಯ
ಕ್ರಿ.ಶ. 1556 ನೇ ಹಿರಿಯೂರಿನ 40 ನೇ ಶಾಸನದಿಂದ ಚಿತ್ರದುರ್ಗ ಪಾಳೆಯಗಾರನಾಗಿದ್ದ ‘ಮತ್ತಿ ತಿಮ್ಮಣ್ಣನಾಯಕ’ನು ಈ ವೀರಭದ್ರದೇವರ ದೇವಾಲಯವನ್ನು ಕಟ್ಟಿಸಿ ಭೂದತ್ತಿ ಬಿಟ್ಟಿದ್ದನೆಂದು ತಿಳಿದು ಬರುತ್ತದೆ.
ಈಗ ಹಾಳು ಬಿದ್ದಿರುವ ಗರ್ಭಗುಡಿಯ ಅವಶೇಷ, ಸುಂದರ ಗರುಡಗಂಭವಿದೆ. ವೀರಭದ್ರಸ್ವಾಮಿಯನ್ನು ತೇರುಮಲ್ಲೇಶ್ವರ ದೇವಸ್ಥಾನದ ದೀಪಸ್ಥಂಬದ ಬಳಿ ಇರಿಸಿದ್ದಾರೆ. ಹಿರಿಯೂರಿನ ಅಜಾದ್ ಬಡಾವಣೆಯಲ್ಲಿ ಪೂರ್ವಾಭಿಮುಖವಾಗಿ ಈ ಗುಡಿ ಇದೆ. ಇದೇ ಮಾದರಿಯ ಗುಡಿಯು ಬಬ್ಬೂರಿನಲ್ಲಿಯೂ ಇದೆ.
|