ಆದಿವಾಲ
ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ ಬೆಂಗಳೂರಿನಿಂದ ಸುಮಾರು 150 ಕಿ.ಮೀ. ದೂರದಲ್ಲಿರುವ ಈ ಗ್ರಾಮವು ಐತಿಹಾಸಿಕ ಮಹತ್ವವನ್ನು ಪಡೆದಿದೆ. ಹಾದಿಯ ಬದಿಯಯ ಹೊಲಗಳಲ್ಲಿ ಮನೆಗಳನ್ನು ಕಟ್ಟಿ ವಾಸ ಮೊಡತೊಡಗಿದ್ದರಿಂದ ‘ಹಾದಿಯ ಹೊಲ’, ‘ಹಾದಿಹೊಲ’, ‘ಆದಿವಾಲ’ ಎಂದು ಹೆಸರಾಗಿದೆ.
ಹಳೆಯ ಊರಿನಲ್ಲಿ 300 ವರ್ಷಗಳ ಹಿಂದಿನ ಗ್ರಾಮದೇವತೆ ಕರಿಯಮ್ಮನ ಗುಡಿ ಇದ್ದು, ಮೂರು ವರ್ಷಕ್ಕೊಮ್ಮೆ ಕಾರ್ತೀಕದಲ್ಲಿ ಜಾತ್ರೆ ನಡೆಯುತ್ತಿದೆ. ಪ್ರಾಚೀನವಾದ ಯರಗುಂಟೆಶ್ವರನ ಜಾತ್ರೆ ಸಹ ಕಾರ್ತೀಕ ಮಾಸದಲ್ಲಿ ಪ್ರತಿವರ್ಷ ಜರುಗುತ್ತದೆ. ಗೊಲ್ಲರಹಟ್ಟಿಯಲ್ಲಿ 200-300 ವರ್ಷಗಳ ಹಿಂದಿನ ಕಾಲದ ಎರಡು ರಂಗನಾಥಸ್ವಾಮಿ ಗುಡಿಗಳಿವೆ. ವಡ್ಡರ ಹಟ್ಟಿಯಲ್ಲಿ ಹಿಂದಿನ ಕಾಲದ ತಿಮ್ಮಪ್ಪನ ಗುಡಿ, 100 ವರ್ಷಗಳ ಹಿಂದೆ ಇರುವ ಬುಕ್ಕಿ ದೇವರ ಗುಡಿಯೂ ಇಲ್ಲಿದೆ.
ಇತಿಹಾಸದ ಪುಟಗಳಲ್ಲಿ ಆದಿವಾಲ
ಚಿತ್ರದುರ್ಗದ ಇತಿಹಾಸದಲ್ಲಿ ‘ಆದಿವಾಲ ಕದನ’ ಎಂದೇ ಪ್ರಸಿದ್ದವಾದ ಮಹತ್ವದ ಕದನ ಆದಿವಾಲದಲ್ಲಿ ನಡೆದಿದೆ. ಕ್ರಿ.ಶ. 1720-21 ರಲ್ಲಿ ‘ಬಿಚ್ಚುಗತ್ತಿ ಭರಮಣ್ಣನಾಯಕ’ನಿಗೂ ವಿಜಾಪುರದ ಮೊಗಲರಿಗೂ ಆದಿವಾಲದ ಮೈದಾನಗಳಲ್ಲಿ ಭೀಕರ ಕದನ ನಡೆದ ಬಗ್ಗೆ ಇತಿಹಾಸದಲ್ಲಿ ದಾಖಲಾಗಿದೆ.
|