|
ಸಾಹಿತ್ಯ ಲೋಕದ ಮಹನೀಯರು
ಚಿತ್ರದುರ್ಗ ಜಿಲ್ಲೆ,ಚರಿತ್ರೆ ಮತ್ತು ಜಾನಪದ ಹಾಗೂ ಕನ್ನಡ ಸಾಹಿತ್ಯ ಚಾರಿತ್ರೆಯಿಂದಲೂ ಮಹತ್ವಹೊಂದಿರುವ ಜಿಲ್ಲೆ. ಪ್ರಸ್ತುತ ಚಿತ್ರದುರ್ಗ ಜಿಲ್ಲೆ ಭೌಗೋಳಿಕವಾಗಿ ಚಿತ್ರದುರ್ಗ, ಮೊಳಕಲ್ಮೂರು, ಹೊಳಲ್ಕೆರೆ, ಹಿರಿಯೂರು, ಚಳ್ಳಕೆರೆ, ಹೊಸದುರ್ಗ ಈ ಆರು ತಾಲ್ಲೂಕುಗಳನ್ನೊಳಗೊಂಡಿದೆ.ಪ್ರಯುಕ್ತ ಜಿಲ್ಲೆಯ ಪ್ರಾಚೀನ ಸಾಹಿತ್ಯವನ್ನು ಈ ವ್ಯಾಪ್ತಿಯಲ್ಲಿ ಗಮನಿಸಬಹುದಾಗಿದೆ.
ಕ್ರಿ.ಪೂ.ಕಾಲದ ಅತ್ಯಂತ ಪ್ರಾಚೀನ ಶಾಸನಗಳು, ಕನ್ನಡನಾಡಿನ ಮೊದಲ ರಾಜವಂಶದ ಸಂಸ್ಥಾಪಕನ ಶಾಸನ,ಕನ್ನಡದ ಮೊಟ್ಟ ಮೊದಲ ಪದ್ಯವಿರುವ ಶಾಸನ,ಸಿರುಮ ನಾಯಕನ ಕುರಿತಾದ ಮೂರು ಚಾರಿತ್ರಿಕ ಕಾವ್ಯಗಳು - ಮುಂತಾದ ಸಹಿತ್ಯ ಕೃತಿಗಳ ಮೂಲಕ ಜಿಲ್ಲೆಯ ಪ್ರಾಚೀನ ಸಾಹಿತ್ಯವು ಕನ್ನಡ ಸಾಹಿತ್ಯ ಚರಿತ್ರೆಗೆ ತನ್ನದೆ ಆದ ಕೊಡುಗೆಯನ್ನು ನೀಡಿದೆ.
ಸಾಹಿತ್ಯಲೋಕದ ಮಹನೀಯರು
|