|
|
|||||||||||||||||||||||||||||||||||||||||||||||||||||||||
![]() |
ಪ್ರಾತಃಸ್ಮರಣೀಯರು |
![]() |
|||||||||||||||||||||||||||||||||||||||||||||||||||||||
|
|||||||||||||||||||||||||||||||||||||||||||||||||||||||||
|
|
|||||||||||||||||||||||||||||||||||||||||||||||||||||||||
ಬೆಳಗಾಂ ಕಾಂಗ್ರೆಸ್ ಅಧಿವೇಶನದ ನಂತರ ಪೂರ್ಣ ರಾಷ್ಟ್ರೀಯ ಆಂದೋಲನದಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ಕಾಂಗ್ರೆಸ್ಸಿನ ಸಕ್ರಿಯ ಸದಸ್ಯರೂ, ಅಧ್ಯಕ್ಷರು ಆಗಿ ಸಲ್ಲಿಸಿದ ಸೇವೆ ಅಪಾರ. ಕೆ.ಸಿ.ರೆಡ್ಡಿಯವರ ಜೊತೆಗೂಡಿ ಕರ್ನಾಟಕದ ಏಕೀಕರಣ ಹಾಗೂ ರಾಜ್ಯದಲ್ಲಿ ಜವಬ್ದಾರಿ ಸರ್ಕಾರದ ರಚನೆಗಾಗಿ ಅವಿರತ ಶ್ರಮಿಸಿದರು. ರಾಜ್ಯದ್ಯಾಂತ ವ್ಯಾಪಕ ಪ್ರವಾಸ ಮಾಡಿ, ಜನರಲ್ಲಿ ಜಾಗೃತಿ ಮೂಡಿಸಿದರು. ಈ ಮಧ್ಯೆ ಹಲವು ಬಾರಿ ಸೆರಮನೆ ವಾಸಿಯಾದರು. ಆದರೂ ಅವರ ಹೋರಾಟದ ಉತ್ಸಾಹ ಕುಂದಲಿಲ್ಲ. ಇವರ ಅವಿರತ ಶ್ರಮದ ಫಲವಾಗಿ ರಾಷ್ಟ್ರ ಸ್ವತಂತ್ರವಾದುದು ಅಲ್ಲದೇ, ಕರ್ನಾಟಕವು ರಾಜ್ಯವು ಅಸ್ತಿತ್ವಕ್ಕೆ ಬರುವಂತಾಯಿತು. ಕರ್ನಾಟಕದ ಏಕೀಕೃತದ ನಂತರ (ವಿಶಾಲ ಮೈಸೂರು ರಾಜ್ಯ) ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ನಂತರ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಿರೋಧಿಗಳಿಂದಲೂ ನಿಷ್ಕಳಂಕ ವ್ಯಕ್ತಿ ಎನಿಸಿಕೊಂಡ ಕೀರ್ತಿ ಅವರದಾಗಿದೆ. ಶ್ರೀ ಎಸ್.ನಿಜಲಿಂಗಪ್ಪನವರ ಜೀವನ ಪ್ರಮುಖ ಘಟ್ಟಗಳು
(ಆಧಾರ: “ಎಸ್.ನಿಜಲಿಂಗಪ್ಪ:ಒಂದು ಅಧ್ಯಯನ”– ಕೋ.ಚೆನ್ನಬಸಪ್ಪ) |
|||||||||||||||||||||||||||||||||||||||||||||||||||||||||
|
© 2008 www.chitharadurga.com. Best fit for 1024 X 768 Resolution. Created by Raghavendra.R & Bharatkumar.B.V. |
|||||||||||||||||||||||||||||||||||||||||||||||||||||||||