A First Kannada Website of Chitradurga District....... ಕನ್ನಡ ರಾಜ್ಯೋತ್ಸವ ಶುಭಾಷಯಗಳು......  www.chitharadurga.com

ಪ್ರಾತಃಸ್ಮರಣೀಯರು

ಮುಖಪುಟ ಇತಿಹಾಸ ಪ್ರೇಕ್ಷಣೀಯ ಸ್ಥಳಗಳು ಪ್ರಾತಃಸ್ಮರಣೀಯರು ಸಾಹಿತ್ಯ ಜನಪದ ಕಲೆ ಛಾಯಾಗ್ರಹಣ ನಮ್ಮ ಬಗ್ಗೆ

ತ.ರಾ.ಸು.
ಎಸ್.ನಿಜಲಿಂಗಪ್ಪ
ಹುಲ್ಲೂರು ಶ್ರೀ.ಜೋಯಿಸರು
ಪೈಲ್ವಾನ್ ನಂಜಪ್ಪ
ಬೆಳಗೆರೆ ಚಂದ್ರಶೇಖರಶಾಸ್ತ್ರಿ
ಕಾಶಿ ಅಪ್ಪಣ್ಣಶೆಟ್ಟರು
ಬಿಚ್ಚುಗತ್ತಿ ಭರಮಣ್ಣನಾಯಕ
ಮೆದಕೇರಿನಾಯಕ
ಒನಕೆ ಓಬವ್ವ
ಟಿ.ಎಸ್.ವೆಂಕಣ್ಣಯ್ಯ
ಬೆಳಗೆರೆ ಕೃಷ್ಣಶಾಸ್ತ್ರಿ
ತಿರುಕ (ಮಲ್ಲಾಡಿಹಳ್ಳಿ)
ಜಾನಪದ ಸಿರಿ 'ಸಿರಿಯಜ್ಜಿ'
ರಂಗಕರ್ಮಿ ಸಿ.ಜಿ.ಕೆ.
ಶ್ರೀಮಲ್ಲಿಕಾರ್ಜುನಸ್ವಾಮಿಗಳು

ಒನಕೆ ಓಬವ್ವ

 

            ಒನಕೆ ಓಬವ್ವಳ ಸಾಹಸಗಾಥೆ ಕನ್ನಡ ನಾಡಿನ ಶೌರ್ಯಗಾಥೆಗಳಲ್ಲಿ ಒಂದಾಗಿ ಜನಜನಿತವಾಗಿದೆ. ಮದಕರಿ ನಾಯಕನ ಆಳ್ವಿಕೆಯ ಕಾಲದಲ್ಲಿ, ಹೈದರ-ಅಲಿಯ ಸೈನ್ಯವು ಕೋಟೆಯನ್ನು ಸುತ್ತುವರೆದಿತ್ತು. ಒಬ್ಬ ಮಹಿಳೆಯನ್ನು ಕೋಟೆಯ ಕಿಂಡಿಯಿಂದ ಒಳ ಹೊಗುವುದನ್ನು ಕಂಡ ಹೈದರ-ಅಲಿಯು ತನ್ನ ಸೈನ್ಯವನ್ನು ಆ ಕಿಂಡಿಯ ಮೂಲಕ ಒಳಗೆ ಕಳುಹಿಸಿ ಕೋಟೆಯನ್ನು ವಶಪಡಿಸಿಕೊಳ್ಳಲು ಸಂಚು ಹೂಡುತ್ತಾನೆ. ಕೋಟೆಯ ಆ ಭಾಗದ (ನೈರುತ್ಯ) ಕಾವಲುಗಾರನ ಹೆಂಡತಿಯೇ ಓಬವ್ವ. ಅವಳು ಗಂಡನಿಗೆ ಊಟ ತರುತ್ತಾಳೆ. ಗಂಡನನ್ನು ಊಟಕ್ಕೆ ಕೂರಿಸಿ, ನೀರು ತರಲು ಹೋಗುತ್ತಾಳೆ. ಅಲ್ಲಿ ಹೈದರ-ಅಲಿಯ ಸೈನಿಕರನ್ನು ಕಿಂಡಿಯ ಮೂಲಕ ನುಸುಳುವದನ್ನು ಕಾಣುತ್ತಾಳೆ. ಎದೆಗುಂದದೆ ಕೈಯಲ್ಲಿದ್ದ ಒನಕೆಯಿಂದಲೇ ಒಳಗೆ ನುಗ್ಗುತ್ತಿರುವ ಒಬ್ಬೊಬ್ಬ ಸೈನಿಕರನ್ನು ಜಜ್ಜಿ ಕೊಲ್ಲುತ್ತಾಳೆ. ಸತ್ತವರನ್ನು ಸಂಶಯ ಬಾರದ ಹಾಗೆ ದೂರ ಎಳೆದು ಹಾಕುತ್ತಾಳೆ. ಅತ್ತ ಊಟ ಮುಗಿಸಿದ ಕಾವಲುಗಾರ ತುಂಬಾ ಹೊತ್ತಿನವರೆಗೂ ಹೆಂಡತಿಗಾಗಿ ಕಾಯ್ದ ಹುಡುಕುತ್ತ ಬರುತ್ತಾನೆ. ಅಲ್ಲಿ ರಕ್ತಸಿಕ್ತವಾದ ಒನಕೆಯನ್ನು ಕೈಯಲ್ಲಿ ಹಿಡಿದು ರಣಚಂಡಿಯ ಅವತಾರದಲ್ಲಿರುವ ಓಬವ್ವನನ್ನು ಸತ್ತು ಬಿದ್ದಿರುವ ನೂರಾರು ಹೈದರ-ಅಲಿಯ ಸೈನಿಕರನ್ನು ನೋಡಿ ಆಶ್ಚರ್ಯಚಕಿತನಾಗುತ್ತಾನೆ. ಕೂಡಲೆ ಕಹಳೆ ಊದಿ ತನ್ನ ಸೇನೆಯನ್ನು ಎಚ್ಚರಗೊಳಿಸುತ್ತಾನೆ ಹಾಗೂ ನಾಯಕನ ಸೇನೆಯು ಕೋಟೆಯನ್ನು ಹೈದರ-ಅಲಿಯ ವಶಕ್ಕೆ ಹೋಗುವದನ್ನು ತಪ್ಪಿಸುತ್ತದೆ. ಓಬವ್ವನ ಸಮಯೋಚಿತ ಯುಕ್ತಿ ಮತ್ತು ಧೈರ್ಯವನ್ನು ಈಗಲೂ ಜನ ನೆನೆಯುತ್ತಾರೆ. ಈ ಘಟನೆಗೆ ಸಾಕ್ಷಿಯಾಗಿ ಈಗಲೂ ಆ ಕಿಂಡಿಯನ್ನು ಏಳು ಸುತ್ತಿನ ಕೋಟೆಯಲ್ಲಿ ಕಾಣಬಹುದು. ಅದು ಚಿತ್ರದುರ್ಗದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

© 2008 www.chitharadurga.com. Best fit for 1024 X 768 Resolution.

Created by Raghavendra.R & Bharatkumar.B.V.