A First Kannada Website of Chitradurga District....... ಕನ್ನಡ ರಾಜ್ಯೋತ್ಸವ ಶುಭಾಷಯಗಳು......  www.chitharadurga.com

ಪ್ರಾತಃಸ್ಮರಣೀಯರು

ಮುಖಪುಟ ಇತಿಹಾಸ ಪ್ರೇಕ್ಷಣೀಯ ಸ್ಥಳಗಳು ಪ್ರಾತಃಸ್ಮರಣೀಯರು ಸಾಹಿತ್ಯ ಜನಪದ ಕಲೆ ಛಾಯಾಗ್ರಹಣ ನಮ್ಮ ಬಗ್ಗೆ

ತ.ರಾ.ಸು.
ಎಸ್.ನಿಜಲಿಂಗಪ್ಪ
ಹುಲ್ಲೂರು ಶ್ರೀ.ಜೋಯಿಸರು
ಪೈಲ್ವಾನ್ ನಂಜಪ್ಪ
ಬೆಳಗೆರೆ ಚಂದ್ರಶೇಖರಶಾಸ್ತ್ರಿ
ಕಾಶಿ ಅಪ್ಪಣ್ಣಶೆಟ್ಟರು
ಬಿಚ್ಚುಗತ್ತಿ ಭರಮಣ್ಣನಾಯಕ
ಮೆದಕೇರಿನಾಯಕ
ಒನಕೆ ಓಬವ್ವ
ಟಿ.ಎಸ್.ವೆಂಕಣ್ಣಯ್ಯ
ಬೆಳಗೆರೆ ಕೃಷ್ಣಶಾಸ್ತ್ರಿ
ತಿರುಕ (ಮಲ್ಲಾಡಿಹಳ್ಳಿ)
ಜಾನಪದ ಸಿರಿ 'ಸಿರಿಯಜ್ಜಿ'
ರಂಗಕರ್ಮಿ ಸಿ.ಜಿ.ಕೆ.
ಶ್ರೀಮಲ್ಲಿಕಾರ್ಜುನಸ್ವಾಮಿಗಳು

ಬೆಳಗೆರೆ ಕೃಷ್ಣಶಾಸ್ತ್ರಿ

ಹೆಸರು

ಬೆಳಗೆರೆ ಕೃಷ್ಣಶಾಸ್ತ್ರಿ

ಜನ್ಮ ದಿನಾಂಕ

22-05-1918

ತಂದೆ

ಚಂದ್ರಶೇಖರಶಾಸ್ತ್ರಿಗಳು (ಆಶುಕವಿ, ಸಂಸ್ಕೃತ ವಿಧ್ವಾಂಸರು)

ತಾಯಿ

ಅನ್ನಪೂರ್ಣಮ್ಮ

ಪತ್ನಿ

ಪದ್ಮಾವತಿ (ಹಿರಿಯೂರು ಮೋಕ್ಷಗುಂಡಂ ಹನುಂತರಾಯರ ಮಗಳು)

ಅಣ್ಣ

ಸೀತಾರಾಮಶಾಸ್ತ್ರಿ (ಗಣಿತ ಪ್ರಾಧ್ಯಾಪಕರು, ನಾಟಕಕಾರರು, ಇವರ ಕಾವ್ಯನಾಮ ಕ್ಷೀರಸಾಗರ)

ತಂಗಿ

ಪಾರ್ವತಮ್ಮ (ಕತೆಗಾರ್ತಿ, ರವಿ ಬೆಳಗೆರೆಯವರ ತಾಯಿ)

ವಿದ್ಯಾಭ್ಯಾಸ

ಬೆಂಗಳೂರಿನ ಮಲ್ಲೇಶ್ವರಂ ಹೈಸ್ಕೂಲ್, ಮೈಸೂರು (ಬಿ.ಇಡಿ)

ವೃತ್ತಿ

ಎಚ್.ಎ.ಎಲ್.ನಲ್ಲಿ ಕಾರ್ಮಿಕ, ಹೆಗ್ಗೆರೆ, ಮೀರಾಸಾಬಿಹಳ್ಳಿ, ದೇವನೂರು, ಚಿತ್ರದುರ್ಗ, ಕಳಸಾ ಮುಂತಾದ ಕಡೆ ಉಪಾಧ್ಯಾಯ ವೃತ್ತಿ.

ಅನುಭವ

  • ಬೆಂಗಳೂರಿನಲ್ಲಿ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದು.

  • 1926ರಲ್ಲಿ ಗಾಂಧೀಜಿಯವರು ಮೈಸೂರು ಸಂಸ್ಥಾನದ ಅತಿಥಿಯಾಗಿ ಬಂದಾಗ ಸ್ವಯಂಸೇವಕರಾಗಿ ಕಾರ್ಯ ನಿರ್ವಹಣೆ.

  •  ಆಚಾರ್ಯ ವಿನೋಬಾ ಅವರ ಜೊತೆಗೆ ಭೂದಾನ ಚಳುವಳಿಯಲ್ಲಿ ಭಾಗವಹಿಸಿದ್ದು, ಶ್ರಮದಾನದ ಮೂಲಕವೇ ಮೀರಾಸಾಬಿಹಳ್ಳಿಯಲ್ಲಿ ಐದು ಕೊಠಡಿಗಳ ಶಾಲಾ ಕಟ್ಟಡ, ಆಸ್ಪತ್ರೆ, ಶಿಕ್ಷಕರ ವಸತಿ ಗೃಹಗಳನ್ನು ನಿರ್ಮಿಸಿದ್ದು.

  • ಹೆಗ್ಗೆರೆಯಲ್ಲಿ ರಂಗಮಂದಿರ, ಶಿವಾಲಯ, ಶಾಲಾ ಕಟ್ಟಡ, ಮುಖ್ಯರಸ್ತೆಯಿಂದ ಊರಿನವರೆಗೆ ರಸ್ತೆ ನಿರ್ಮಾಣ

  • ಮುಕುಂದೂರು ಸ್ವಾಮಿಗಳ ಆಶ್ರಮದಲ್ಲಿ ಪ್ರಾರ್ಥನಾ ಮಂದಿನ ನಿರ್ಮಾಣ, ಜಾನಪದ ಕಂಪ್ಯೂಟರ್ ಸಿರಿಯಜ್ಜಿಯನ್ನು ಸಾಂಸ್ಕೃತಿಕ ಲೋಕಕ್ಕೆ ಪರಿಚಯಿಸಿದ್ದು.

  • ಶ್ರೀ ಟಿಮಡಿ ಕ್ರಿಸ್ಟೋಫರ್ ಕ.ಹಿಲ್., ಶ್ರೀ ಪೀಟರ್ ಜೆ.ಕ್ಲಾಸ್, ಶ್ರೀ ಆಂಡ್ರೂಸ್ ಮತ್ತು ತೀ.ನಂ.ಶಂಕರನಾರಾಯಣ, ಆರ್.ಶೇಷಶಾಸ್ತ್ರಿ, ಕೃಷ್ಣಮೂರ್ತಿ ಹನೂರು, ಬಸವರಾಜ ಕಲ್ಗುಡಿ ಮುಂತಾದ ಸಂಶೋಧಕರಿಗೆ ನೆರವು.

  • ಜಾನಪದ ಜಂಗಮ ಎಸ್.ಕೆ.ಕರೀಂಖಾನ್, ಸಿರಿಯಜ್ಜಿ, ಮುಂತಾದವರನ್ನು ಬೆಳಗೆರೆ ಜನತೆ ಪರವಾಗಿ ಸನ್ಮಾನಿಸಿದ್ದು.

  • ತಿರುವಣ್ಣಾಮಲೆಯ ರಮಣ ಮಹರ್ಷಿ, ಆನಂದಾಶ್ರಮದ (ಕೇರಳ) ರಾಮದಾಸರು, ಬಾಗೂರಿನ ಶರಣಮ್ಮ, ಹೃಷಿಕೇಶದ ಶಿವಾನಂದಸ್ವಾಮಿ, ಮುಕುಂದೂರು ಸ್ವಾಮಿ, ಜೆ.ಕೆ.ಗಾಂಧಿ, ಮಲ್ಲಾಡಿಹಳ್ಳಿಯ ರಾಘವೇಂದ್ರಸ್ವಾಮೀಜಿ ಅವರೊಂದಿಗಿನ ಒಡನಾಟ.

ಕೃತಿಗಳು

ತುಂಬಿ (ಕವನ ಸಂಕಲನ), ಹಳ್ಳಿಚಿತ್ರ (ನಾಟಕ), ಹಳ್ಳಿಮೇಷ್ಟ್ರು (ನಾಟಕ), ಆಕಸ್ಮಿಕ (ಅಪ್ರಕಟಿತ ನಾಟಕ), ಪಾಶುಪತಾಸ್ತ್ರ (ಅಪ್ರಕಟಿತ ನಾಟಕ), ಏಕಲವ್ಯ (ಅಪ್ರಕಟಿತ ನಾಟಕ), ಸೊಹ್ರಾಬ್-ರುಸ್ತುಂ (ಅಪ್ರಕಟಿತ ನಾಟಕ), ತೆನಾಲಿರಾಮ (ಅಪ್ರಕಟಿತ ನಾಟಕ), ವಿಚಿತ್ರ ಸಾಮ್ರಾಜ್ಯಂ (ಅಪ್ರಕಟಿತ ನಾಟಕ), ಅಲ್ಲಾವುದ್ದೀನ್ (ಅಪ್ರಕಟಿತ ನಾಟಕ), ಹಿಂಗೂ ಮಾಡ್ ನೋಡ್ರಿ (ಅಕ್ರಪಟಿತ ನಾಟಕ), ಯೇಗ್ದಾಗೆಲ್ಲಾ ಐತೆ (ಶ್ರೀ ಮುಕುಂದೂರು ಸ್ವಾಮಿಗಳನ್ನು ಕುರಿತ ನೆನಪು), ಅಂತರ್ ಧ್ವನಿ (ಅನುವಾದ, ಮೂಲ: ಇನ್ನರ್ ವಾಯ್ಸ್ –ಲೇ||ಡಬ್ಲು.ಸಿ.ಸ್ಯಾಂಡರ್ಸ್)

ಸಾಹಿತಿಗಳ ಸ್ಮೃತಿ

ಬೇಂದ್ರೆ, ವಿ.ಸೀ., ರಾಜರತ್ನಂ, ಡಿ.ವಿ.ಜಿ., ದೇವುಡು ಅವರೊಂದಿಗಿನ ನೆನಪು

ಮರೆಯಲಾದೀತೆ

ಗ್ರಾಮೀಣ ಪ್ರತಿಭೆಗಳು, ಸಮಾಜಸೇವಾ ಬಂಧುಗಳು, ಆಧ್ಯಾತ್ಮಿಕ ಸಾಧಕರು, ಸಾಹಿತಿಗಳೊಂದಿಗಿನ ಒಡನಾಟದ ನೆನಪುಗಳು

ಅವರ ಕುರಿತು... ಸಾಹಿತ್ಯಕ ವಾತಾವರಣದ ಕುಟುಂಬದಲ್ಲಿ ಉದಯಿಸಿ ನಮ್ಮೊಂದಿಗೆ ಇರುವ ಅನುಕರಣೀಯ ವ್ಯಕ್ತಿ.

 


 (ಆಧಾರ: ಯೇಗ್ದಾಗೆಲ್ಲಾ ಐತೆ ಬೆಳಗೆರೆ ಕೃಷ್ಣಶಾಸ್ತ್ರಿ)

© 2008 www.chitharadurga.com. Best fit for 1024 X 768 Resolution.

Created by Raghavendra.R & Bharatkumar.B.V.