LEGENDS OF CHITRADURGA
ದಿನಾಂಕ:

ಬೆಳಗೆರೆ ಚಂದ್ರಶೇಖರಶಾಸ್ತ್ರಿಗಳು

 

ಇವರನ್ನ ಅಲೆಮಾರಿ ಎನ್ನಲೋ, ಆಶುಕವಿ ಎನ್ನಲೋ ಅಥವಾ ಅವದೂತರು ಎನ್ನಲೋ ಒಂದು ತಿಳಿಯುತ್ತಿಲ್ಲ. ಬಹುಶಃ ಈ ಎಲ್ಲವೂ ಇರಬಹುದು. ಏಕೆಂದರೆ ಎಲ್ಲಿಯೂ ಇವರು ತಮ್ಮದೆಂದು ಒಂದು ಗೂಡು ಕಟ್ಟಿಕೊಳ್ಳಲಿಲ್ಲ. ಊರಿಂದ-ಊರಿಗೆ, ಮನೆಯಿಂದ-ಮನೆಗೆ, ಮನದಿಂದ-ಮನಕ್ಕೆ ಸ್ವಚ್ಛಂದವಾಗಿ ಹಾರಿಕೊಂಡು-ಹಾಡಿಕೊಂಡು ಇದ್ದವರು. ಸ್ವತಃ ಏನನ್ನೂ ಓದದಿದ್ದರೂ ಶಾಲೆಯೊಂದನ್ನು ಕಟ್ಟಿದರು. ಇವರು ಸಾವಿರಾರು ಆಶುಕವಿತೆಗಳನ್ನು ಕಟ್ಟಿ ಹಾಡಿದವರು.

 

        ಇವರು ಖ್ಯಾತ ಸಾಹಿತಿಗಳಾದ ಬೆಳಗೆರೆ ಕೃಷ್ಣಶಾಸ್ತ್ರಿ ಹಾಗೂ ಕ್ಷೀರಸಾಗರ(ಸೀತಾರಾಮಶಾಸ್ತ್ರಿ) ರವರ ತಂದೆಯಾಗಿದ್ದರು. ಇವರ ಇನ್ನೊಬ್ಬ ಮಗಳಾದ ಬೆಳಗೆರೆ ಜಾನಕಮ್ಮ ನವರು ಜನಕಜೆ ಎಂಬ ಹೆಸರಿನಲ್ಲಿ ಹಲವಾರು ಪದ್ಯಗಳನ್ನು ಬರೆದಿದ್ದಾರೆ. ಇವರ ಮೇಲೆ ದ.ರಾ.ಬೇಂದ್ರೆಯವರು ತಂಗಿ ಜಾನಕಮ್ಮ ಎಂಬ ಪದ್ಯವನ್ನು ಸಹ ಬರೆದಿದ್ದಾರೆ.

 

        ಚಂದ್ರಶೇಖರಶಾಸ್ತ್ರಿಗಳ ಕವನಗಳು ಇದುವರೆಗೂ ಗ್ರಂಥರೂಪದಲ್ಲಿ ಹೊರಬರದಿದ್ದರೂ, ಇತ್ತೀಚೆಗೆ ಇವರ ಕುರಿತು ಅನೇಕ ಸಾಹಿತಿಗಳು ಬರೆದಿರುವ ಲೇಖನಮಾಲೆಯು ಡಾ|| ಎಂ.ವಿ.ಶ್ರೀನಿವಾಸ್, ಹಾಗೂ ಕೃಷ್ಣಮೂರ್ತಿ ಹನೂರು ಅವರ ಸಂಪಾದಕತ್ವದಲ್ಲಿ ಇದು ಎಂಥಾ ಜೀವನವಯ್ಯಾ ಎಂಬ ಹೆಸರಿನಲ್ಲಿ ಪುಸ್ತಕವೊಂದು ಪ್ರಕಟಗೊಂಡಿದೆ.

 

ಮಹನೀಯರು ಕಂಡಂತೆ.... ಚಂದ್ರಶೇಖರ ಶಾಸ್ತ್ರಿಗಳು:

ಡಾ||ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರ ಮಾತುಗಳಲ್ಲಿ…..

ಅಜ್ಜ ಚಂದ್ರಶೇಖರಶಾಸ್ತ್ರಿಗಳ ಬಾಳಿನ, ಸಾವಿನ ರೀತಿಗಳನ್ನು ನೆನೆಯುವಾಗ ನನಗೆ ಜೊತೆಯಾಗಿ ತುಂಬ ಸೋಜಿಗ, ತುಂಬ ಹೆಮ್ಮೆ ಆಗುತ್ತದೆ

 

ಡಿ.ವಿ.ಜಿ. ಯವರ ಮಾತುಗಳಲ್ಲಿ (ದಿ: 25-10-1962)…..

“He is a venerable man who has seen in to the depths of life and is yet keeping his soul untouched and in good cheer.”

 

ಡಾ|| ದ.ರಾ.ಬೇಂದ್ರೆ ರವರ ಮಾತುಗಳಲ್ಲಿ.....

ಪೂಜ್ಯ ಚಂದ್ರಶೇಖರಶಾಸ್ತ್ರಿಗಳು ನೆನಪಾದೊಡನೆ ಯಾವುದೋ ಅಟ್ಟಂಬಟ್ಟಂ ಅರಣ್ಯದೊಳಗೆ, ತನ್ನ ಹುತ್ತ ಬಿಟ್ಟು, ಹೊರಬಿದ್ದ ನಾಗರಾಜ ತನ್ನ ನಾಗಿಣಿಯೊಂದಿಗೆ ವಿಲಾಸನೃತ್ಯ ಮಾಡುತ್ತಿದ್ದಂತೆ ಒಂದು ಭಾವಚಿತ್ರ ಮೂಡಿಕೊಳ್ಳುತ್ತದೆ.

.....

© 2011 www.chitharadurga.com. Best fit for 1024 X 768 Resolution.