LEGENDS OF CHITRADURGA
ದಿನಾಂಕ:

ಎಸ್.ನಿಜಲಿಂಗಪ್ಪ (1902-2000)

 

 ಸ್ವಾತಂತ್ರ್ಯ ಹೋರಾಟಗಾರರು, ಆಧುನಿಕ ಕರ್ನಾಟಕದ ಶಿಲ್ಪಿಯೂ ಆದ ಎಸ್.ನಿಜಲಿಂಗಪ್ಪ ರವರು ಓರ್ವ ಅಪರೂಪದ ವ್ಯಕ್ತಿ. ಬಳ್ಳಾರಿಯ ಹಲವಾಗಿಲು ಎಂಬಲ್ಲಿ ಸಾಧಾರಣ ಕುಟುಂಬದಲ್ಲಿ ಜನಿಸಿದ ಇವರು ರಾಷ್ಟ್ರಮಟ್ಟದ ನಾಯಕರಾಗಿ ರೂಪುಗೊಂಡರು. ಬೆಂಗಳೂರಿನಲ್ಲಿ ಶಿಕ್ಷಣ ಪಡೆದು ಚಿತ್ರದುರ್ಗದಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದರು.

ಬೆಳಗಾಂ ಕಾಂಗ್ರೆಸ್ ಅಧಿವೇಶನದ ನಂತರ ಪೂರ್ಣ ರಾಷ್ಟ್ರೀಯ ಆಂದೋಲನದಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ಕಾಂಗ್ರೆಸ್ಸಿನ ಸಕ್ರಿಯ ಸದಸ್ಯರೂ, ಅಧ್ಯಕ್ಷರು ಆಗಿ ಸಲ್ಲಿಸಿದ ಸೇವೆ ಅಪಾರ. ಕೆ.ಸಿ.ರೆಡ್ಡಿಯವರ ಜೊತೆಗೂಡಿ ಕರ್ನಾಟಕದ ಏಕೀಕರಣ ಹಾಗೂ ರಾಜ್ಯದಲ್ಲಿ ಜವಬ್ದಾರಿ ಸರ್ಕಾರದ ರಚನೆಗಾಗಿ ಅವಿರತ ಶ್ರಮಿಸಿದರು. ರಾಜ್ಯದ್ಯಾಂತ ವ್ಯಾಪಕ ಪ್ರವಾಸ ಮಾಡಿ, ಜನರಲ್ಲಿ ಜಾಗೃತಿ ಮೂಡಿಸಿದರು. ಈ ಮಧ್ಯೆ ಹಲವು ಬಾರಿ ಸೆರಮನೆ ವಾಸಿಯಾದರು. ಆದರೂ ಅವರ ಹೋರಾಟದ ಉತ್ಸಾಹ ಕುಂದಲಿಲ್ಲ. ಇವರ ಅವಿರತ ಶ್ರಮದ ಫಲವಾಗಿ ರಾಷ್ಟ್ರ ಸ್ವತಂತ್ರವಾದುದು ಅಲ್ಲದೇ, ಕರ್ನಾಟಕವು ರಾಜ್ಯವು ಅಸ್ತಿತ್ವಕ್ಕೆ ಬರುವಂತಾಯಿತು. ಕರ್ನಾಟಕದ ಏಕೀಕೃತದ ನಂತರ (ವಿಶಾಲ ಮೈಸೂರು ರಾಜ್ಯ) ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ನಂತರ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಿರೋಧಿಗಳಿಂದಲೂ ನಿಷ್ಕಳಂಕ ವ್ಯಕ್ತಿ ಎನಿಸಿಕೊಂಡ ಕೀರ್ತಿ ಅವರದಾಗಿದೆ.

 

 ಶ್ರೀ ಎಸ್.ನಿಜಲಿಂಗಪ್ಪನವರ ಜೀವನ ಪ್ರಮುಖ ಘಟ್ಟಗಳು 

10-12-1902

ಹಲವಾಗಿಲಿನಲ್ಲಿ ಜನನ, ಪ್ರಾಥಮಿಕ, ಮಾಧ್ಯಮಿಕ, ಕಾಲೇಜು ಶಿಕ್ಷಣ ದಾವಣಗೆರೆ, ಚಿತ್ರದುರ್ಗ ಮತ್ತು ಬೆಂಗಳೂರಿನಲ್ಲಿ

1924-26

ಪುಣೆ – ಕಾನೂನು ಪದವಿ.

1926-36

ಚಿತ್ರದುರ್ಗದಲ್ಲಿ ವಕೀಲಿ ವೃತ್ತಿ

1937

ಕಾಂಗ್ರೆಸ್ಸಿಗೆ ಸೇರ್ಪಡೆ, ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

29-09-1937

ತುರುವನೂರು ಈಚಲಮರ ಸತ್ಯಾಗ್ರಹದ ನಾಯಕರೆಂಬ ಕಾರಣ ಮುಂಜಾಗ್ರತ ಖೈದು.

1940

ಭೇಷರತ್ ಬಿಡುಗಡೆ

09-08-1942

ಚಲೇಜಾವ್ ಚಳುವಳಿ ಸಂಧರ್ಭದಲ್ಲಿ ಖೈದು.

1944

ಬಿಡುಗಡೆ.

1946-55

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕರಿಸಿದರು.

1948

ಅಖಿಲ ಕರ್ನಾಟಕ ಸರ್ವಪಕ್ಷ ಸಮ್ಮೇಳನದ ನೇತಾರ.

1946-50

ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದರು.

1951-56

ಪ್ರಥಮ ಲೋಕಸಭಾ ಸದಸ್ಯ

01-01-1956

ಏಕೀಕೃತ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ

1957ರ ಮಾರ್ಚ್

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ

1958ರ ಮೇ

ಮುಖ್ಯಮಂತ್ರಿ ಪದವಿಗೆ ರಾಜೀನಾಮೆ

1962

ಹೊಸದುರ್ಗ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು

1962

ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸಿ ಅವಿರೋಧ ಆಯ್ಕೆ

1962-67

ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆ

1967

ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ

1967

ಮೂರನೇ ಬಾರಿ ಮುಖ್ಯಮಂತ್ರಿ

1968

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ, ಮುಖ್ಯಮಂತ್ರಿ ಪದವಿಗೆ ರಾಜೀನಾಮೆ.

1969

ಕಾಂಗ್ರಸ್ ಅಧ್ಯಕ್ಷರಾಗಿ ಮುಂದುವರಿಕೆ (ಫರೀದಾಬಾದ್ ಅಧಿವೇಶನ)

1969ರ ಡಿಸೆಂಬರ್

ಕಾಂಗ್ರೆಸ್ ಹೋಳು

1970

ಕಾಂಗ್ರಸ್ (ಸಂಸ್ಥ) ಅಧ್ಯಕ್ಷರು

1975-77

ದೇಶದಲ್ಲಿ ತುರ್ತು ಪರಿಸ್ಥಿತಿ

1977ರ ಮಾರ್ಚ್

ಇಂದಿರಾಗಾಂಧಿ ಸೋಲು, ಪ್ರಥಮ ಕಾಂಗ್ರೇಸೇತರ ಜನತಾಪಕ್ಷ ಕೇಂದ್ರದಲ್ಲಿ ಅಧಿಕಾರ

2000

ಮರಣ


 (ಆಧಾರ: ಎಸ್.ನಿಜಲಿಂಗಪ್ಪ:ಒಂದು ಅಧ್ಯಯನ ಕೋ.ಚೆನ್ನಬಸಪ್ಪ)

.....

© 2011 www.chitharadurga.com. Best fit for 1024 X 768 Resolution.