ಶ್ರೀ ಜಗದ್ಗುರು ಮಲ್ಲಿಕಾರ್ಜುನ ಸ್ವಾಮಿಗಳು
ಐತಿಹಾಸಿಕ ಹಿನ್ನಲೆಯ ಚಿತ್ರದುರ್ಗ ಮುರುಘರಾಜೇಂದ್ರ ಸ್ವಾಮೀಜಿ ಅವರು ಧಾರ್ಮಿಕ ಕ್ಷೇತ್ರದಲ್ಲಿನ ಅಪರೂಪದ ಮಹಾ ದಿವ್ಯಚೇತನ. 1974 ರಿಂದ 1994 ರವರೆಗೆ ಚಿತ್ರದುರ್ಗ ಬೃಹನ್ಮಠದ ಸರ್ತೋಮುಖ ಅಭಿವೃದ್ಧಿಯ ಬಗ್ಗೆ ಗುರುತರವಾದ ಹೊಣೆ ಹೊತ್ತು ಧಿಮಂತವಾಗಿ ನಡೆಸಿಕೊಂಡು ಬಂದ ಮಹಾ ಮೇಧಾವಿ ಮತ್ತು ಧಾರ್ಮಿಕ ಮುತ್ಸದ್ದಿ. ಶ್ರೀಗಳ ಅವಿರತ ಸಾಧನೆಗಳು ಅಪಾರ.
ಪೂಜ್ಯ ಜಗದ್ಗುರುಗಳ ಪೂರ್ವಾಶ್ರಮ ಬಿಜಾಪುರ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಾಜಿಬೀಳಗಿ. 1917ರಲ್ಲಿ ಶ್ರೀ ಗುರುಪಾದಯ್ಯ ಮತ್ತು ಶ್ರೀಮತಿ ಚನ್ನಬಸಮ್ಮ ಅವರ ಜೇಷ್ಠ ಪುತ್ರರಾಗಿ ಜನಿಸಿದರು. ಅವರ ಪ್ರಾಥಮಿಕ ಅಭ್ಯಾಸ ಅಥಣಿ ಗಚ್ಚಿನಮಠದಲ್ಲಿ ನಡೆಯಿತು. ಅಥಣಿಯ ಮಠಕ್ಕೆ ಹಿರಿಯ ಜಗದ್ಗುರು ಜಯದೇವ ಮುರುಘರಾಜೇಂದ್ರ ಸ್ವಾಮಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಚಿಕ್ಕ ಬಾಲಕ ಮಲ್ಲಿಕಾರ್ಜುನರ ಮೇಲೆ ದೃಷ್ಟಿಯಾಯಿತು. ಶ್ರೀಗಳ ಕೃಪೆಗೆ ಪಾತ್ರರಾಗಿ ಕಾಶಿಯ ಪ್ರಸಿದ್ಧ ಸಂಸ್ಕೃತ ಮಹಾ ವಿದ್ಯಾಲಯದಲ್ಲಿ ಶ್ರೀ ಮಲ್ಲಿಕಾರ್ಜುನರು 16 ವರ್ಷ ವೇದ, ಸಂಸ್ಕೃತ, ಉಪನಿಷತ್, ಹಿಂದಿ, ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ಪಾಂಡಿತ್ಯಪಡೆದರು.
ವ್ಯಾಸಂಗ ಮುಗಿದ ನಂತರ ಜಯದೇವ ಜಗದ್ಗುರುಗಳು ಮಲ್ಲಿಕಾರ್ಜುನ ಅವರಿಗೆ ತಿಪಟೂರಿನ ವೀರಶೈವಾನಂದಾಶ್ರಮ ಮತ್ತು ದಾವಣಗೆರ ವಿರಕ್ತ ಮಠದ ಉಸ್ತುವಾರಿಕೆ ವಹಿಸಿದರು. ಮಲ್ಲಿಕಾರ್ಜುನರ ಧೀಮಂತಿಕೆ, ಶಿಸ್ತು ಮತ್ತು ಪ್ರಾಮಾಣಿಕತೆ ಕಂಡು ಹಾವೇರಿಯ ಹೊಸ ಮಠಧ್ಯಾಕ್ಷರಾಗಿ 1946ರಲ್ಲಿ ನೇಮಕ ಮಾಡಲಾಯಿತು. 1964ರಲ್ಲಿ ಬೃಹನ್ಮಠದ ಜಗದ್ಗುರು ಜಯವಿಭವ ಮುರುಘರಾಜೇಂದ್ರ ಶ್ರೀಗಳು ಲಿಂಗೈಕ್ಯರಾದ ಮೇಲೆ ಮಲ್ಲಿರ್ಕಾಜುನ ಅವರು ಚಿತ್ರದುರ್ಗ ಬೃಹನ್ಮಠದ 26ನೇ ಜಗದ್ಗುರುಗಳಾಗಿ ನೇಮಕಗೊಂಡರು. ಶ್ರೀ ಮಠದ ಪೀಠಧೀಶ್ವರರಾದ ನಂತರ ಲಿಂಗೈಕ್ಯ ಜಯದೇವ ಮುರುಘುರಾಜೇಂದ್ರರು ನಾಡಿನಾದ್ಯಾಂತ ಸ್ಥಾಪಿಸಿದ ಶಾಖಾ ಮಠಗಳಿಗೆ ಪುನಶ್ಚೇತನ ನೀಡಿದರು.
ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಚಿತ್ರದುರ್ಗ ನಗರ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ನೂರಾರು ಉನ್ನತ ಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಪ್ರಾಥಮಿಕ ದಿಂದ ಉನ್ನತ ಶಿಕ್ಷಣದವರೆಗಿನ ಸಂಸ್ಥೆಗಳು. ವಿಧ್ಯಾರ್ಥಿನಿಲಯಗಳು, ಆಸ್ಪತ್ರೆ ಹೀಗೆ ಸಮಾಜದ ಸರ್ತೋಮುಖ ಅಭಿವೃದ್ಧಿಗೆ ಶ್ರಮಿಸಿದರು. ವಿರಕ್ತ ಪೀಠದ ದಿವ್ಯ ಪರಂಪರೆಯನ್ನು ನಾಡಿನಾದ್ಯಾಂತ ಶ್ರೀಮಂತಗೊಳಿಸಿದ ಶ್ರೀಗಳು 1994ನೇ ಅಗಷ್ಟ್ 7ರಂದು ಭಾನುವಾರ ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಹೃಧಯಘಾದಿಂದ ನಿಧನರಾದರು. ಶ್ರೀಗಳ ಮನೋಭೀಲಾಷೆಯಂತೆ ನಿಸರ್ಗದ ಮಡಿಲಾದ ಒಂಟಿ ಕಂಬದ ಮುರಘಾ ಮಠದಲ್ಲಿ ಭವ್ಯ ಸಮಾಧಿ ಮಂಟಪವನ್ನು ನಿರ್ಮಿಸಿದ್ದಾರೆ.
ಲೇಖಕರು : ಕೆ. ಬಿ. ಬಸವರಾಜಯ್ಯ |