HISTORY OF CHITRADURGA
ದಿನಾಂಕ:

ಪ್ರಾಗಿತಿಹಾಸ

 

 ಐತಿಹಾಸಿಕ ಮಹತ್ವದ ಕೇಂದ್ರವಾಗಿರುವ ಚಿತ್ರದುರ್ಗ ಜಿಲ್ಲೆಯು ಪ್ರಾಗೈತಿಹಾಸಿಕವಾಗಿಯೂ ಪ್ರಾಮುಖ್ಯತೆಯನ್ನು ಹೊಂದಿದೆ. ಆದಿ ಹಳೇಶಿಲಾಯುಗ, ಸೂಕ್ಷ್ಮಶಿಲಾಯುಗ, ನೂತನ ಶಿಲಾಯುಗ, ಶಿಲಾ-ತಾಮ್ರಯುಗ ಮತ್ತು ಕಬ್ಬಿಣಯುಗದ ಬೃಹತ್ ಶಿಲಾಯುಗ ಸಂಸ್ಕೃತಿಗಳ ನೆಲೆವೀಡಾಗಿದೆ. ಇಲ್ಲಿನ ಚಂದ್ರವಳ್ಳಿ ಮತ್ತು ಬ್ರಹ್ಮಗಿರಿ ಉತ್ಖನನಗಳು ಈ ಪ್ರದೇಶದ ಪ್ರಾಗಿತಿಹಾಸದ ಮಹತ್ವವನ್ನು ಅರಿಯಲು ಸಾಧ್ಯವಾಗಿದೆ.

       ಚಿತ್ರದುರ್ಗವು ಜಿಲ್ಲಾ ಪ್ರದೇಶದಲ್ಲಿ ಮಾನವನ ವಸತಿ ಇತ್ತೆಂಬುದಕ್ಕೆ ಹಲವು ಪುರಾತತ್ವ ಕುರುಹುಗಳನ್ನು ಗುರುತಿಸಲಾಗಿದೆ. ಅದರಂತೆ ಹೊಸದುರ್ಗ ತಾಲ್ಲೂಕಿನ ಜಾನಕಲ್ಲು ಗ್ರಾಮ ಹಾಗೂ ಹೊಳಲ್ಕೆರೆ ತಾಲ್ಲೂಕಿನ ತಾಳ್ಯಗಳಲ್ಲಿ ಆದಿ, ಹಳೆ ಶಿಲಾಯುಗ ಸಂಸ್ಕೃತಿಯ ಶಿಲೋಪಕರಣಗಳು ಕಂಡು ಬಂದಿದೆ. ಅದರ ನಂತರದ ಮಧ್ಯ ಹಾಗೂ ಅಂತ್ಯ ಹಳೇಶಿಲಾಯುಗದ ಯಾವುದೇ ಕುರುಹುಗಳು ಈವರೆಗೆ ಬೆಳಕು ಕಂಡಿಲ್ಲ. ಸೂಕ್ಷ್ಮ ಶಿಲಾಯುಗ ಸಂಸ್ಕೃತಿಯ ಅವಶೇಷಗಳು ಮೊಳಕಾಲ್ಮೂರು ತಾಲ್ಲೂಕಿನ ಬ್ರಹ್ಮಗಿರಿ, ಚಿಪ್ಪಿನಕೆರೆ, ನುಂಕಿಮಲೆ, ಹಳೆಕೆರೆ, ಪೂಜಾರಹಟ್ಟಿ, ಹರಳಯ್ಯನಗುಡಿ, ಹಾನಗಲ್ಲುಗಳಲ್ಲಿ ಕಂಡು ಬಂದಿದ್ದು, ಶಿಲಾಯುಗದ ಮಾನವನ ಜೀವನದ ಮುಂದುವರಿಕೆಯನ್ನು ಗುರುತಿಸಲು ಸಹಾಯಕವಾಗಿದೆ. ನೂತನ ಶಿಲಾಯುಗ ಸಂಸ್ಕೃತಿಯ ಜೀವನ ಕ್ರಮವು ಪ್ರಮುಖ ಘಟ್ಟವಾಗಿದ್ದು, ಅಂತಹ ಅವಶೇಷಗಳು ಬ್ರಹ್ಮಗಿರಿ ಮತ್ತು ಚಂದ್ರವಳ್ಳಿಯಲ್ಲಿ ಕಂಡು ಬಂದಿದೆ. ಶಿಲಾ-ತಾಮ್ರಯುಗದ ಅವಶೇಷಗಳು ಚಂದ್ರವಳ್ಳಿ, ಜಟಿಂಗರಾಮೇಶ್ವರಗಳಲ್ಲಿಯೂ ಕಂಡು ಬಂದಿದೆ. ಬೃಹತ್ ಶಿಲಾಯುಗ ಸಂಸ್ಕೃತಿಯ ನೆಲೆ ಹಾಗೂ ಗೋರಿ ಅತಿ ಹೆಚ್ಚು ಸಂಖ್ಯೆಯಲ್ಲಿ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಕಾಣಬಹುದು.

 

.....

© 2011 www.chitharadurga.com. Best fit for 1024 X 768 Resolution.