ಮೈಸೂರು ಸಂಸ್ಥಾನ
ವಿಜಯನಗರದ ಪಾಳೆಯಗಾರನಾಗಿದ್ದ ರಾಜ ಒಡೆಯನು 1610 ರಲ್ಲಿ ಶ್ರೀ ರಂಗಪಟ್ಟಣ್ಣವನ್ನು ವಿಜಯನಗರದಿಂದ ಗೆದ್ದು ಅದನ್ನೇ ರಾಜಧಾನಿಯನ್ನಾಗಿ ಮಾಡಿಕೊಂಡು ಸಾಮ್ರಾಜ್ಯದ ವಿರುದ್ಧ ಬಂಡಾಯ ಆರಂಭಸಿದ. ಮುಂದೆ ಸ್ವತಂತ್ರವಾದ ಮೈಸೂರಿನಲ್ಲಿ ಕಂಠೀರವ ನರಸರಾಜ (1638-59) ,ಚಿಕ್ಕದೇವರಾಜ (1673-1704) ಮುಂತಾದ ಗಣ್ಯ ಅರಸರು ಆಳಿದರು. ಚಿಕ್ಕದೇವರಾಜ ಬೆಣಗಳೂರನ್ನು ಮೊಗಲರಿಂದ ಗುತ್ತಿಗೆ ಪಡೆದು ಅಲ್ಲಿ ಕೋಟೆ ವೆಂಕಟರಮಣ ಸ್ವಾಮಿ ಮಂದಿರವನ್ನು ಕಟ್ಟಿಸಿದನು. ತಿರುಮಲಾರ್ಯ, ಸಂಗರಾರ್ಯ, ಸಂಚಿಯ ಹೊನ್ನಮ್ಮ ಇವನ ಆಸ್ಥಾನದಲ್ಲಿ ಇದ್ದ ಕವಿಗಳು.
ಹೈದರ್-ಟಿಪ್ಪು
ಹೈದರ್ ಆಲಿ (1761-82) ಮೈಸೂರು ಅರಸರ ದುರ್ಬಲಸ್ಥಿಗತಿಯ ಲಾಭ ಪಡೆದ ತಾನೇ ಅಧೀಕಾರ ನಿರ್ವಹಿಸಿದ. ಆದರೆ ವಿಜಯನಗರದ ಪಾಳೆಗಾರರಾಗಿದ್ದು (ಚಿತ್ರದುರ್ಗದ ಪಾಳೆಪಟ್ಟು ಸೇರಿ) ಮುಂದೆ ಸ್ವತಂತ್ರರಾದ ಅನೇಕ ಪಾಳೆಗಾರರ ಆಳ್ವಿಕೆಯನ್ನು ಕೊನೆಗೊಳಸಿ ಕರ್ನಾಟಕದ ಏಕಿಕರಣದ ಸಾಧನೆಗೆ ಆತ ತನ್ನದೆ ಆದ ರೀತಿಯ ಕೊಡುಗೆಯನ್ನಯ ನೀಡಿದರು. ಬ್ರಿಟೀಷರ ವಿರುದ್ಧ ಹೈದರ್-ಟಿಪ್ಪು ನಡೆಸಿದ ಹೋರಾಟಗಳಿಂದ. ಮೈಸೂರು ಜಾಗತಿಕ ಕೀರ್ತಿ ಪಡೆಯಿತು.ಕೈಗಾರಿಕೆ, ವಾಣಿಜ್ಯಗಳನ್ನು ಸುಧಾರಿಸಬೇಕೆಂಬ ಟಿಪ್ಪುವಿನ ತೀವ್ರ ಪ್ರಯತ್ನ ಫಲವಾಗಿ ರೇಷ್ಮೆ ವ್ಯವಸಾಯ ಕರ್ನಾಟಕಕ್ಕೆ ಬಂತು. ಟಿಪ್ಪುವನ್ನು ಬ್ರಿಟಿಷರಉ ಸೋಲಿಸಿದ 1799 ರಲ್ಲಿ ರಾಜ್ಯವನ್ನು ಮೈಸೂರು ವಂಶಕ್ಕೆ ಕೊಟ್ಟರು.
ಆಧುನಿಕ ಮೈಸೂರು
ಮೈಸೂರು ಅರಸರು ಕರ್ನಾಟಕದ ಸಾಹಿತ್ಯ, ಕಲೆ, ಸಂಸ್ಕೃತಿ, ಅರ್ಥವ್ಯವಸ್ಥೆಗಳ ಪ್ರಗತಿ ಹಲವು ರೀತಿಯ ಕೊಡುಗೆ ನೀಡಿದರು. ಮುಮ್ಮಡಿ ಕೃಷ್ನರಾಜ ಒಡೆಯರು (1799-1831) , ಚಾಮರಾಜ ಒಡೆಯರು (1881-94), ನಾಲ್ವಡಿ ಕೃಷ್ಣರಾಜ ಒಡೆಯರು (1901-40) ಸ್ಮರಣೀಯ ಸಾಧನೆಗಳಂದ ಪ್ರಸಿದ್ಧರು.ದಿವಾನುರುಗಳಾಗಿದ್ದ ರಂಗಚಾರ್ಲು, ಶೇಷಾದ್ರಿ ಅಯ್ಯರ್, ಎಮ್.ವಿಶ್ವೇಶ್ವರಯ್ಯ ಹಾಗು ಮಿರ್ಜಾ ಇಸ್ಮಾಯಿಲ್ ತಮ್ಮ್ ಆಡಳಿತದಿಂದ ಪ್ರಸಿದ್ಧರಾದವರು. ವಾಣಿವಿಲಾಸ ಸಾಗರ, ಕನ್ನಂಬಾಡಿ ಅಣೆಕಟ್ಟು , ಅನೇಕ ಸರಕಾರಿ ಕ್ಷೇತ್ರದ ಉದ್ದಿಮೆಗಳು (ಭದ್ರವತಿ ಕಬ್ಬಿಣ ಕಾರ್ಖಾನೆ, ಮಂಡ್ಯದ ಸರ್ಕರೆ ಕಾರ್ಖಾನೆ......) ಈ ಕಾಲದಲ್ಲಿ ಬೆಳೆದವು. ಮೈಸೂರು ವಿಶ್ವವಿದ್ಯಾಲಯವೂ (1916), ಕನ್ನಡ ಸಾಹಿತ್ಯ ಪರಿಷತ್ತ್ (1915) ಸ್ಥಾಪನೆಗೊಂಡವು.
ಆ ಕಾಲದಲ್ಲಿ ಕನ್ನಡಪರ ಚಟುವಟಿಕೆಗಳ ಮಂಚೂಣಿಯಲ್ಲಿದ್ದ ಮೈಸೂರು ಸಂಸ್ಥಾನದ ಬಿ.ಎಮ್.ಶ್ರೀ, ಡಿ.ವಿ.ಜಿ, ಹೆಚ್.ವಿ.ನಂಜುಂಡಯ್ಯ, ಕರ್ಪೂರ ಶ್ರೀನಿವಾಸ ರಾವ್ ಹಾಗೂ ಸಂಸ್ಥಾನದ ಹೊರಗಿನ ಆಲೂರು ವೆಂಕಟರಾಯರು, ಮುದುವೀಡು ಕೃಷ್ಣರಾಯರು, ಬೆನಗಲ್ ರಾಮರಾಯರು, ಪಂಜೆ ಮಂಗೇಶರಾಯರು, ಮುಂತಾದವರು ಪರಿಷತ್ತಿನ ಚಟುವಟಿಕೆಗಳಲ್ಲಿ ಆರಂಭದಿಂದ ಪಾಲ್ಗೊಂಡು ನಾಡ ಏಕಿಕರಣಕ್ಕೆ ಬೇಕಾದ ಭದ್ರ ಬುನಾದಿಯನ್ನು ಹಾಕಿದರು. |