HISTORY OF CHITRADURGA
ದಿನಾಂಕ:

ಮೌರ್ಯರು

 

 ಕರ್ನಾಟಕ ತನ್ನ ಚಾರಿತ್ರಿಕ ಘಟ್ಟವನ್ನು ಗುರುತಿಸಿಕೊಳ್ಳುವುದು ಮೌರ್ಯರ ಕಾಲದಿಂದ; ಮುಖ್ಯವಾಗಿ ಅಶೋಕ ಸಾಮ್ರಾಟನ (ಕ್ರಿ.ಪೂ. 273-232) ಆಳ್ವಿಕೆಯ ಅವಧಿಯಿಂದ ಕರ್ನಾಟಕದಲ್ಲಿ ಈವರೆಗೆ ಬೆಳಕಿಗೆ ಬಂದಿರುವ ಈ ಸಾಮ್ರಾಟನ ಶಾಸನಗಳು ದೊರೆತಿರುವ ಸ್ಥಳಗಳೆಂದರೆ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ದಾಪುರ, ಜಟಿಂಗರಾಮೇಶ್ವರ, ಬಳ್ಳಾರಿ ಜಿಲ್ಲೆಯ ನಿಟ್ಟೂರು ಮತ್ತು ಉದೇಗೋಳಂ, ಕೊಪ್ಪಳ ಜಿಲ್ಲೆಯ ಗವಿಮಠ, ರಾಯಚೂರು ಜಿಲ್ಲೆಯ ಮಸ್ಕಿ ಹಾಗೂ ಕರ್ನಾಟಕ ಇನ್ನಿತರ ಭಾಗಗಳನ್ನು ಅಶೋಕನ ಮುಖ್ಯ ಹಾಗೂ ಪ್ರತ್ಯೇಕ ಶಿಲಾ ಶಾಸನಗಳು ಬೆಳಕಿಗೆ ಬಂದಿದೆ.

 

ಕರ್ನಾಟಕ ಪ್ರದೇಶದಲ್ಲಿ ಅಶೋಕ ತನ್ನ ಶಾಸನಗಳನ್ನು ಬರೆಸಲು ಆಯ್ಕೆ ಮೌರ್ಯ ಸ್ಥಳಗಳನ್ನು ಪರಿಶೀಲಿಸಿದ ನಂತರ, ಈ ಪ್ರದೇಶಗಳು ಮೊದಲಿಗೆ ಮೌರ್ಯ ಸಾಮ್ರಾಜ್ಯದ ಹೊರಗೆ ಸ್ಥಳೀಯ ಅರಸರ ಅಧೀನದಲ್ಲಿದ್ದವು. ಒಟ್ಟಿನಲ್ಲಿ ಕರ್ನಾಟಕದ ಗುಲ್ಬರ್ಗಾ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳ ಕೆಲವು ಪ್ರದೇಶಗಳು ಮೌರ್ಯ ಸಾಮ್ರಾಜ್ಯದ ನೇರ ಆಳ್ವಿಕೆಗೆ ಒಳಪಟ್ಟಿದ್ದು, ಸ್ಪಷ್ಟಪಡಿಸುತ್ತದೆ. ಮೌರ್ಯ ಚಂದ್ರಗುಪ್ತನು ನಂದರನ್ನು ಸೋಲಿಸಿದ ಪರಿಣಾಮವಾಗಿ ಆ ರಾಜ್ಯದ ದಕ್ಷಿಣದಲ್ಲಿದ್ದ ಈ ಗಡಿ ಪ್ರದೇಶಗಳಲ್ಲಿ ಶಿಲಾಶಾಸನಗಳನ್ನು ಬರೆಸಿದನು.


(ಆಧಾರ: ಮೌರ್ಯ ಮತ್ತು ಶಾತವಾಹನರ ಯುಗ ಲಕ್ಷ್ಮಣ ತೆಲಗಾವಿ)

 

.....

© 2011 www.chitharadurga.com. Best fit for 1024 X 768 Resolution.