A First Kannada Website of Chitradurga District....... ಕನ್ನಡ ರಾಜ್ಯೋತ್ಸವ ಶುಭಾಷಯಗಳು......  www.chitharadurga.com

ಇತಿಹಾಸ

ಮುಖಪುಟ ಇತಿಹಾಸ ಪ್ರೇಕ್ಷಣೀಯ ಸ್ಥಳಗಳು ಪ್ರಾತಃಸ್ಮರಣೀಯರು ಸಾಹಿತ್ಯ ಜನಪದ ಕಲೆ ಛಾಯಾಗ್ರಹಣ ನಮ್ಮ ಬಗ್ಗೆ
 
ಸಂಕ್ಷಿಪ್ತ ಇತಿಹಾಸ
ಪ್ರಾಗಿತಿಹಾಸ
ಮೌರ್ಯರು
ಶಾತವಾಹನರು
ಕದಂಬರು
ಗಂಗರು
ಚಾಲುಕ್ಯರು
ಹೊಯ್ಸಳರು
ವಿಜಯನಗರ
ಚಿತ್ರದುರ್ಗ ಪಾಳೆಯಗಾರರು
ಬೂದಿಹಾಳು ಪಾಳೆಯಗಾರರು
ಹರತಿ ಪಾಳೆಯಗಾರರು
ಹಟ್ಟಿ ಪಾಳೆಯಗಾರರು
ಮತ್ತೋಡು ಪಾಳೆಯಗಾರರು
ಮೈಸೂರು ಸಂಸ್ಥಾನ

ಹೊಯ್ಸಳರು

 

 ಚಾಲುಕ್ಯರ ಪತನಾನಂತರ ಕರ್ನಾಟಕದಲ್ಲಿ ತಲೆ ಎತ್ತಿದವರು ಹೊಯ್ಸಸಳರು. ಕ್ರಿ.ಶ.11ನೇ ಶತಮಾನದ ಆದಿಭಾದಲ್ಲಿ ಪ್ರಾಭಲ್ಯಕ್ಕೆ ಬಂದ ಇವರು ಸುಮಾರು  ಮೂರು ಶತಮಾನಗಳಿಗೂ  ದೀರ್ಘಕಾಲ ಕರ್ನಾಟಕದ ಬಹು ಭಾಗವನ್ನು ಆಳಿದರು . ವಿಷ್ಣುವರ್ಧನನು (ಕ್ರಿ ಶ 1140) ತಲಕಾಡು ಪ್ರದೇಶದಿಂದ ಚೋಳರನ್ನು ಅಟ್ಟಿ ತನ್ನ ವಶಕ್ಕೆ ತೆಗೆದುಕೊಂಡುದಲ್ಲದೆ ಕಂಚಿವಶಪಡಿಸಿಕಂಡು ಕಂಚಿಗೊಂಡ ಎಂಬ ಬಿರುದನ್ನು ಸಂಪದಿಸಿದನು.  ತಮಿಳುನಾಡಿನ ಶೈವ ದೊರೆಗಳ ಉಪಟಳವನ್ನು ತಾಳಲಾರದೆ ಬಂದ ಶ್ರೀ ರಾಮನುಜರಿಗೆ ಅವನು ಆಶ್ರಯ ನೀಡಿದನು. ಅವನ ಪತ್ನಿ ಶಾಂತಲೆಯು ಪಟ್ಟದ ರಾಣಿಯಾಗಿ ಸಲಹೆಗಳನ್ನು ಕೊಡುತಿದ್ದಳು,  ಸ್ವಂತ ಶ್ರೇಷ್ಟ ಗಾಯಕಿಯೂ ನರ್ತಕಿಯೂ ಆಗಿದ್ದ ಅವಳೂ  ಕಲೆಗೆ ಆಪಾರ ಪ್ರೊತ್ಸಾಹ ಕೊಟ್ಟಳು.

ಹೊಯ್ಸಳರಲ್ಲಿ ಅತ್ಯಮತ ಬಲಿಷ್ಠನೆಂದರೆ ಇಮ್ಮಡಿ ವೀರಬಲ್ಲಾಳ; ಅವನ ಕಾಲದಲ್ಲಿ ಯುದ್ಧಗಳ ಮೇಲೆ ಯುದ್ಧಗಳು ನಡೆದವು ವೀರಬಲ್ಲಾಳನ ಸಹಾಯದಿಂದ ಪಾಂಡ್ಯರ ಆಕ್ರಮಣಕ್ಕೆ ಒಳಗಾಗಿದ್ದ ಚೋಳರ ಆಧಿಪತ್ಯವು ಕುಸಿಯದಂತೆ ಉಳಿಯಿತು.

ಕಲೆಃ

ಹೊಯ್ಸಳರು ಕಲಾರಧಕರು .ಅವರ ದೇಲಯಗಳ ಶೈಲಿ ಹೊಯ್ಸಳರ ಶೈಲಿ ಎಂದೆ ಪ್ರಸಿದ್ಧವಾಗಿದೆ, ಅವರು ಕಟ್ಟಸಿದ ಬೇಲೂರು ಹಳೇಬೀಡು ಸೋಮನಾಥ ದೇವಾಲಯಗಳು ಅಷ್ಟೆ ಅಲ್ಲದೆ ಚಿತ್ರದರ್ಗದಲ್ಲಿಯೂ ಸಹ ಅವರ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯುಗಳನ್ನು ಕಾಣಬಹುದು.

© 2008 www.chitharadurga.com. Best fit for 1024 X 768 Resolution.

Created by Raghavendra.R & Bharatkumar.B.V.