ಬಾದಾಮಿ ಚಾಲುಕ್ಯರು
ಬಾಗಲಕೋಟೆ ಜಿಲ್ಲೆಯ ಬಾದಾಮಿಯನ್ನು ರಾಜಧಾನಿಯನ್ನಾಗಿಸಿ ಕ್ರಿ.ಶ. 750 ರವರೆಗೆ ಆಳಿದ ಚಾಲುಕ್ಯರು ಅಖಿಲ ಭಾರತ ಕೀರ್ತಿಯನ್ನು ಪಡೆದ ಕನ್ನಡಿಗ ಸಾರ್ವಭೌಮ ಸಾಮ್ರಾಟರು. ಈ ವನಶದ ಮೂಲ ಪುರುಷ ಜಯಸಿಂಹ ಮೊದಲನೇ ಪುಲಕೇಶಿಯು (ಕ್ರಿ.ಶ. 540) ಬಾದಾಮಿ ಆಭೇದ್ಯವಾದ ಕೋಟೆಯನ್ನು ಕಟ್ಟತಿಸಿದನು.
ಇಮ್ಮ್ಡಿ ಪುಲಕೇಶಿಯು ಈ ವಂಶದಲ್ಲಿಯೇ ಅತ್ಯಂತ ಪ್ರಖ್ಯಾತಿ ಹೊಂದಿರುವ ರಾಜನಾಗಿದ್ದಾನೆ. ಮಧ್ಯ ಭಾರತದ ಮಾಳವರನ್ನು, ಗುರ್ಜರನ್ನೂ ಸೋಲಿಸಿದ ಖ್ಯಾತಿ ಇವನದು. ಕ್ರಿ.ಶ. 612 ರಲ್ಲಿ ಉತ್ತರದ ಶ್ರೀ ಹರ್ಷನು ಅಹಾಮಕಾರದಿಮದ ದಂಡೆತ್ತಿ ಬಂದಾಗ ಅಚನ ಸೌನ್ಯವನ್ನು ನರ್ಮಾದ ಆಚೆಗೆ ಹಿಮ್ಮೆಟಿಸಿ “ಪರಮೇಶ್ವರ”ನೆಂಬ ಬಿರುದನ್ನು ಪಡೆದನು. ಕೋಸಲ, ಕಳಿಂಗದ ದೊರೆಗಳು ಅವನಿಗೆ ಶರಣಗತರಾದರು. ಕಂಚಿಯ ಮಹೇಂದ್ರವರ್ಮನನ್ನು ಸೋಲಿಸಿದನು. ಅವನ ಕಾಲದಲ್ಲಿ ಅವನ ರಾಜ್ಕ್ಕೆ ಬಂದ ಚೀನಿ ಪ್ರಾವಾಸಿ ಹುಯಯೇನತ್ಸಾಂಗ್ “ ಪ್ರಜೆಗಳ ಮತ್ತು ಭಟರ ಪ್ರೀತಿಯನ್ನು ಪಡೆಯುತ್ತಿರು ಪುಲಕೇಶಿಗೆ ಆ ಪ್ರೀತಿಯೇ ನಿಜವಾದ ಕೋಟೆ. ಅವನ ಸೈನಿಕರು ಸೋತು ಹೋದರೆ ಎಲ್ಲಿ ತಮ್ಮ ಹೆಂಗಸರು ಬಳೆ ಕುಂಕುಮ ಕೊಟ್ಟು ಅವಮಾನಿಸುತ್ತಾರೋ ಎಂದು ಹೆದರಿ ಹೋರಾಡುತ್ತಾರೆ. ಸೋತೆ ಎಂದು ಹಿಂದಕ್ಕೆ ಬರರು. ಕನ್ನಡಿಗರು ಅಸಹಾಯಶೂರರು “.ಎಂದು ವರ್ಣಿಸುತ್ತಾನೆ.
ದಕ್ಷಿಣ ಮಹಾರಾಷ್ಟ್ರವು ಪುಲಕೇಶಿಯ ಅಧಿನದಲ್ಲಿತ್ತು. ಅದೇ ವಂಶದ ವಿಕ್ರಮಾದಿತ್ಯನಗೆ ‘ರಣರಸಿಕ ‘ ಎಂಬ ಬಿರುದಿತ್ತು. ಪಲ್ಲವರು ಹಿಂದೆ ಬಾದಾಮಿಯನ್ನು ಗೆದ್ದು ಅದನ್ನು ಸುಟ್ಟಿದ್ದರೂ, ವಿಜಯಾದಿತ್ಯನೆಮಬ ದೊರೆ ಕಂಚಿಯನ್ನು ಹಾಳುಮಾಡಲಿಲ್ಲ. ಕನ್ನಡಿಗರು ಶೂರರು; ಆದರೆ ವಿಧ್ವಂಸಕರಲ್ಲ. ಬಾದಾಮಿ ಚಾಲುಕ್ಯರ ಸಾಮ್ರಾಜ್ಯವು ಕರ್ನಾಟಕದಲ್ಲದೆ ಆಂಧ್ರ, ಮಹಾರಾಷ್ಟ್ರ, ಗುಜಾರಾತ್, ಮಧ್ಯ ಪ್ರದೇಶ ಒಳಗೊಂಡಿತ್ತು |