A First Kannada Website of Chitradurga District....... ಕನ್ನಡ ರಾಜ್ಯೋತ್ಸವ ಶುಭಾಷಯಗಳು......  www.chitharadurga.com

ಜಾನಪದ

ಮುಖಪುಟ ಇತಿಹಾಸ ಪ್ರೇಕ್ಷಣೀಯ ಸ್ಥಳಗಳು ಪ್ರಾತಃಸ್ಮರಣೀಯರು ಸಾಹಿತ್ಯ ಜನಪದ ಕಲೆ ಛಾಯಾಗ್ರಹಣ ನಮ್ಮ ಬಗ್ಗೆ
 
ಜನಪದ ಸಾಹಿತ್ಯ
ಜಿಲ್ಲಾ ಬುಡಕಟ್ಟು
ಜಾನಪದ ಕಲೆಗಳು
ಜಾನಪದ ವೀರರು
ಜಾನಪದ ನೆಲೆಗಳು
ಹೊಸದುರ್ಗ ತಾಲ್ಲೂಕು
ಬನಸಿಹಳ್ಳಿ ಏಕನಾಥೇಶ್ವರಿ
ದಶರಥ ರಾಮೇಶ್ವರ
ಹಾಲುರಾಮೇಶ್ವರ
ಹೆಗ್ಗೆರೆ: ಜೈನ ಯಾತ್ರಾ ಸ್ಥಳ
ಜಾನಕಲ್ಲು
ಕೂರ್ಮಾವತಾರ ಕ್ಷೇತ್ರ
ಸೂಜಿಗಲ್ಲು ಮೈಲಾರ ಕ್ಷೇತ್ರ
*******
ಚಳ್ಳಕೆರೆ ತಾಲ್ಲೂಕು
ಚಿತ್ರದುರ್ಗ ತಾಲ್ಲೂಕು
ಹಿರಿಯೂರು ತಾಲ್ಲೂಕು
ಮೊಳಕಾಲ್ಮೂರು ತಾಲ್ಲೂಕು

ಹೆಗ್ಗೆರೆ: ಜೈನ ಯಾತ್ರಾ ಸ್ಥಳ

            ಕರ್ನಾಟಕ ರಾಜ್ಯದಲ್ಲಿ ಒಟ್ಟು ಐದು {ಹೆಗ್ಗೆರೆ{ಗಳಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮೂರು {ಹೆಗ್ಗೆರೆ{ಗಳು ಹಾಗೂ ತುಮಕೂರು ಜಿಲ್ಲೆಯಲ್ಲಿ ಎರಡು {ಹೆಗ್ಗೆರೆ{ಗಳು ಇದ್ದು, ಅವುಗಳೆಲೆಲ್ಲ ಚಿತ್ರದುರ್ಗದ ಜಿಲ್ಲೆಯ ಹೊಸದುರ್ಗದ {ಹೆಗ್ಗೆರೆ{ಗೆ ತನ್ನದೇ ಆದ ಆಗಿರುವ {ಜಾನಪದ ಹಿರಿಮೆ{ ಇದೆ. ಈ ಗ್ರಾಮ ಬೂದಾಳು ಶ್ರೀರಾಂಪುರ ಗ್ರಾಮಕ್ಕೆ ಸಮೀಪವಿದೆ.

        ಹೊಸದುರ್ಗ ಸೀಮೆಯ ಅತ್ಯಂತ್ಯ ಪ್ರಾಚೀನ ಸ್ಥಳಗಳಲ್ಲಿ ಒಂದಾಗಿರುವ ಹೆಗ್ಗೆರೆ, ಜೈನರ ಯಾತ್ರಾಸ್ಥಳವಾಗಿ ಹೆಸರು ಪಡೆದಿದೆ. 850 ವರ್ಷಗಳಷ್ಟು ಹಿಂದಿನ ಸುಂದರವಾದ ಜಿನಾಲಯ ಮತ್ತು ಶಿವಾಲಯಗಳು ಇಲ್ಲಿವೆ. ಮತ್ತೊಂದು ವಿಶೇಷವೆಂದರೆ ಈ ಪುಟ್ಟ ಹಳ್ಳಿಗೆ ಮೂರು ಕೆರೆಗಳಿವೆ. ಪಾಪರಾಜನ ಕೆರೆ, ಕೆಂಪಮ್ಮನ ಕೆರೆ ಮತ್ತು ಗೌಡನ ಕೆರೆ.

        ಒಂದು ಕಾಲಕ್ಕೆ ಹೆಗ್ಗೆರೆಯಲ್ಲಿ ಜೈನರ ವಸತಿಗಳಿದ್ದವೆನ್ನಲಾಗಿದೆ. ಇಲ್ಲಿನ ಶ್ರೀ 1008 ಸುಪಾರ್ಶ್ವನಾಥಸ್ವಾಮಿಯ ಬಸದಿಯ ಅತ್ಯಂತ್ಯ ಕಲಾತ್ಮಕವಾಗಿದ್ದು, ಇದರಲ್ಲಿ ಒಟ್ಟು ಐದುನೂರಕ್ಕೂ ಹೆಚ್ಚು ಸಂಖ್ಯೆಯ ಕಮಲಗಳ ಕೆತ್ತನೆಯಿದೆ. ಗ್ರಾಮದ ಹೊರಗಿರುವ ಶ್ರೀ ಕಲ್ಲೇಶ್ವರ ದೇವಾಲಯ ಹಾಗೂ ಶ್ರೀ ಗಳಗೇಶ್ವರ ದೇವಾಲಯಗಳಲ್ಲಿನ ಶಿವಲಿಂಗ ಮತ್ತು ನಂದಿ ವಿಗ್ರಹಗಳು ಅತ್ಯಂತ್ಯ ಬೃಹತ್ ಪ್ರಮಾಣದಲ್ಲಿದ್ದು, ಕಲಾತ್ಮಕವಾಗಿ ಇರುವುದು. ಹೆಗ್ಗೆರೆಯಲ್ಲಿಯೇ ಉದ್ಭವಗೊಂಡಳೆಂದು ನಂಬಲಾಗಿರುವ ಶ್ರೀ ಕೆಂಪಮ್ಮದೇವಿ, ಇಲ್ಲಿನ ಗ್ರಾಮದೇವತೆಯಾಗಿದ್ದು, {ಕೆಂಪ್ಪಮ್ಮನ ಕೆರೆ{ಯ ದಡದಲ್ಲಿ ಮೂಲದೇವರ ಗುಡಿಯು ಗ್ರಾಮದೊಳಗೆ ಉತ್ಸವ ಮೂರ್ತಿಯ ಗುಡಿಯೂ ಇದೆ.


(ಆಧಾರ: ಹೊಸದುರ್ಗ ಸೀಮೆ ಜನಾಪದ ಬಾಗೂರು ನಾಗರಾಜಪ್ಪ)

© 2008 www.chitharadurga.com. Best fit for 1024 X 768 Resolution.

Created by Raghavendra.R & Bharatkumar.B.V.