ಚಿತ್ರದುರ್ಗ ತಾಲ್ಲೂಕಿನ ಜಾನಪದ ನೆಲೆಗಳು
ಮಿಂಚೇರಿ: ಮ್ಯಾಸಬೇಡರ ಸಾಂಸ್ಕೃತಿಕ ವೀರ ಗಾದ್ರಿಪಾಲನಾಯಕನ ನೆಲೆ:
ಚಿತ್ರದುರ್ಗ ತಾಲ್ಲೂಕು ಕೇಂದ್ರದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಮಿಂಚೇರಿ ಗುಡ್ಡಗಾಡು ಅರಣ್ಯದ ತಪ್ಪಲಿನಲ್ಲಿ ಹುಲಿಯೊಂದಿಗೆ ಹೋರಾಟ ಮಾಡಿ ಮಡಿದಿರುವ ಮ್ಯಾಸಬೇಡರ ಮತ್ತೊಬ್ಬ ಸಾಂಸ್ಕೃತಿಕ ವೀರ ಗಾದಿರಿ ಪಾಲಯಕನಾಯಕನ ನೆಲೆ ಇದೆ. ಬಯಲುಸೀಮೆಯಲ್ಲೊಂದು ಮಲೆನಾಡಿನ ಸೆರಗಿನಂತಿರುವ ಈ ನೆಲೆಯನ್ನು ಅಭಿವೃದ್ಧಿಪಡಿಸಿದರೆ ಮತ್ತೊಂದು ಜೋಗಿಮಟ್ಟಿಯಾದೀತು.
ಚಿತ್ರಹಳ್ಳಿ: ಕಾಡುಗೊಲ್ಲರ ಚಿತ್ರಲಿಂಗ ಮೂಲ
ಚಿತ್ರದುರ್ಗದ ತಾಲ್ಲೂಕು ಕೇಂದ್ರದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಚಿತ್ರಹಳ್ಳಿಯಲ್ಲಿ ಕಾಡುಗೊಲ್ಲರ ಪಂಚಲಿಂಗಗಳಲ್ಲೊಂದಾದ ಚಿತ್ರಲಿಂಗನ ಮೂಲನೆಲೆಯಿದೆ.
|