|
|
|||||||||||
![]() |
ಜಾನಪದ |
![]() |
|||||||||
|
|||||||||||
ಚಳ್ಳಕೆರೆ ತಾಲ್ಲೂಕು ಕೇಂದ್ರದಿಂದ 10 ಕಿ.ಮೀ. ದೂರದಲ್ಲಿದೆ. ತಳಕು ಗ್ರಾಮದಿಂದ ಹಿಂಭಾಗಕ್ಕೆ ಒಂದು ಗುಡ್ಡ ಕಾಣುತ್ತದೆ. ಇದನ್ನು ಎತ್ತಪ್ಪನ ಗುಡ್ಡ ಎನ್ನುತ್ತಾರೆ. ತಳುಕಿನಿಂದ 3-4 ಕಿ.ಮೀ. ನಡೆದು ಹೋಗಬೇಕು. ಈ ಬೆಟ್ಟದ ತುದಿಯಲ್ಲಿ ಕಾಡುಗೊಲ್ಲರ ಸಾಂಸ್ಕೃತಿಕ ವೀರನಾದ ಎತ್ತಪ್ಪನ ಸಮಾಧಿ ಇದೆ. ಪಶುಪಾಲಕನಾದ ಈತ ತನ್ನ ಶೀಲ-ಶೌಚಗಳಿಗೆ ಹೆಸರಾದವನು. ಗುಡ್ಡದ ಬೋರಿ ಎಂಬ ಬೇಡರ ಹೆಣ್ಣಿನ ಪ್ರೇಮವನ್ನು ತಿರಸ್ಕರಿಸಿದ ಕಾರಣವಾಗಿ ಬೇಡರು ಅವನ ತಲೆ ತೆಗೆಯುತ್ತಾರೆ. ಹೀಗಾಗಿ ಕುರಿ ಆಳಿದ ಕಾಡುಗೊಲ್ಲರು ಮುಂಗಾರು ಮಳೆಯ ನಂತರ ತಮ್ಮ ನೆಚ್ಚಿನ ವೀರನಿಗೆ ಗೌರವ ಸಲ್ಲಿಸಲು, ಪ್ರತಿವರ್ಷ ಹಾಲುಗ್ಗಿ ತಂದು ಎಡೆ ಹಾಕಿ, ಮೀಸಲು ಹಾಲನ್ನು ಎತ್ತಪ್ಪನ ಸಮಾಧಿಗೆ ಅಭಿಷೇಕ ಮಾಡುವ ಜನಪದ ಸಂಪ್ರದಾಯ ಇದೆ. ಬೆಟ್ಟದ ಮೇಲೆ ಒಂದು ದೋಣಿಯೂ ಇದೆ. (ಆಧಾರ: “ಮ್ಯಾಸಮಂಡಲ”- ಡಾ||ಮೀರಾಸಾಬಿಹಳ್ಳಿ ಶಿವಣ್ಣ) |
|||||||||||
|
© 2008 www.chitharadurga.com. Best fit for 1024 X 768 Resolution. Created by Raghavendra.R & Bharatkumar.B.V. |
|||||||||||