A First Kannada Website of Chitradurga District....... ಕನ್ನಡ ರಾಜ್ಯೋತ್ಸವ ಶುಭಾಷಯಗಳು......  www.chitharadurga.com

ಜಾನಪದ

ಮುಖಪುಟ ಇತಿಹಾಸ ಪ್ರೇಕ್ಷಣೀಯ ಸ್ಥಳಗಳು ಪ್ರಾತಃಸ್ಮರಣೀಯರು ಸಾಹಿತ್ಯ ಜನಪದ ಕಲೆ ಛಾಯಾಗ್ರಹಣ ನಮ್ಮ ಬಗ್ಗೆ
 
ಜನಪದ ಸಾಹಿತ್ಯ
ಜಿಲ್ಲಾ ಬುಡಕಟ್ಟು
ಜಾನಪದ ಕಲೆಗಳು
ಜಾನಪದ ವೀರರು
ಜಾನಪದ ನೆಲೆಗಳು
ಚಳ್ಳಕೆರೆ ತಾಲ್ಲೂಕು
ಗೌರಸಮುದ್ರ ಮಾರಿನೆಲೆ
ದೊಡ್ಡಉಳ್ಳಾರ್ತಿ ಗೌರಮ್ಮ
ಕ್ಯಾತಪ್ಪನ ಪರಿಷೆ
ಚಳ್ಳಕೆರೆಮ್ಮ/ವೀರಭದ್ರಸ್ವಾಮಿ
ಗೋಸಿಕೆರೆ ಸಾರ್ವಡೇಶ್ವರ
ಎತ್ತಪ್ಪನ ಗುಡ್ಡ
ಮತ್ಸಮುದ್ರದ ಉಟ್ಲುಮರ
ಜಗಲೂರಜ್ಜನ ನೆಲೆ/ ದೊಡ್ಡೇರಿ
*******
ಹೊಸದುರ್ಗ ತಾಲ್ಲೂಕು
ಚಿತ್ರದುರ್ಗ ತಾಲ್ಲೂಕು
ಹಿರಿಯೂರು ತಾಲ್ಲೂಕು
ಮೊಳಕಾಲ್ಮೂರು ತಾಲ್ಲೂಕು

ಮತ್ಸಮುದ್ರದ ಉಟ್ಲುಮರ ಎಂಬ ರೋಮಂಚನಕಾರಿ ಕ್ರೀಡೆ:

            ಚನ್ನಮ್ಮನಾಗತಿಹಳ್ಳಿಗೆ ಕೇವಲ 1 ಕಿ.ಮೀ. (ಚಳ್ಳಕೆರೆಯಿಂದ ಸುಮಾರು 20 ಕಿ.ಮೀ.) ದೂರದಲ್ಲಿದೆ. ವ್ಯಾಸರಾಯರು ಪ್ರತಿಷ್ಟಾಪಿಸಿದ್ದಾರೆ ಎಂದು ಹೇಳುವ ಆಳೆತ್ತರದ ಆಂಜನೇಯನ ವಿಗ್ರಹವಿದೆ. ಕಾರ್ತಿಕ ಮಾಸದಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ಉಟ್ಲುಮರ ಎಂಬ ರೋಮಾಂಚನಕಾರಿ ಕ್ರೀಡೆಯೂ ನಡೆಯುತ್ತದೆ. ವೃತ್ತಾಕಾರದ ಕೆಸರಪಾತಿಯಲ್ಲಿ ಸುಮಾರು 20 ಅಡಿ ಎತ್ತರದ ಕಂಬ ನಿಲ್ಲಿಸಿ, ಅದಕ್ಕೆ ಲೋಳೆಸರ, ಕೆಸರು ಬಳಿದು ಜಾರುವಂತೆ ಮಾಡಿರುತ್ತಾರೆ. ಜಾರುವ ಕಂಬವನ್ನು ಹತ್ತುವ, ಇನ್ನೇನು ಕಂಬದ ತುದಿ ಮುಟ್ಟಿಬಿಟ್ಟೇವು ಎನ್ನುವ ಹಂತದಲ್ಲಿ ಅಲ್ಲಿಂದ ಜರ್ರನೇ ಜಾರಿ ಬೀಳುವ ಕ್ರೀಡೆ ರೋಮಾಂಚನಕಾರಿಯಾಗಿದೆ.

ಚಿಲುಮೆಸ್ವಾಮಿ:

            ಮತ್ಸಮುದ್ರ ಗ್ರಾಮದಿಂದ ಕೇವಲು 3 ಕಿ.ಮೀ. ದೂರದಲ್ಲಿರುವ (ಚಳ್ಳಕೆರೆಯಿಂದ ಸುಮಾರು 20 ಕಿ.ಮೀ) ಜಾಜೂರು ಸಮೀಪವಿರುವ ಹರವಿಗೊಂಡನಹಳ್ಳಿಗೆ ಹೋಗುವ ದಾರಿಯಲ್ಲಿದೆ. ಇಲ್ಲಿ ಚಿಲುಮೆಸ್ವಾಮಿಯವರ ಗದ್ದುಗೆ ಇದೆ. ಇದನ್ನು ಸಮಾಧಿ ಎಂದೂ ಹೇಳುತ್ತಾರೆ. ಪಕ್ಕದಲ್ಲೇ ವೇದಾವತಿ ನದಿ ಹರಿಯುತ್ತದೆ. ಒಮ್ಮೆ ಚಿಲುಮೆ ತೋಡುತ್ತಿದ್ದಾಗ ಇವರು ಸಿಕ್ಕಿದ್ದರಿಂದ ಚಿಲುಮೆಸ್ವಾಮಿ ಎಂಬ ಹೆಸರು ಬಂತು ಎಂಬ ದಂತಕಥೆ ಇದೆ.


(ಆಧಾರ: ಮ್ಯಾಸಮಂಡಲ- ಡಾ||ಮೀರಾಸಾಬಿಹಳ್ಳಿ ಶಿವಣ್ಣ)

© 2008 www.chitharadurga.com. Best fit for 1024 X 768 Resolution.

Created by Raghavendra.R & Bharatkumar.B.V.