|
ದೊಡ್ಡೇರಿ |
ಚಳ್ಳಕೆರೆಯಿಂದ ಪೂರ್ವಕ್ಕೆ 7 ಕಿ.ಮೀ. ದೂರದಲ್ಲಿದೆ. ಇದು ಒಂದು ಕಾಲದಲ್ಲಿ ಚಿತ್ರದುರ್ಗ ಪಾಳೆಯಗಾರರ ಗಡಿಠಾಣೆಯಾಗಿತ್ತು. ಇದು ಕೊನೆಯ ಮೆದಕೇರಿನಾಯಕನ ಸ್ವಗ್ರಾಮವು ಹೌದು. ದೊಡ್ಡೇರಿ ಕ್ರಿ.ಶ. 1882 ರವರೆಗೂ ತಾಲ್ಲೂಕು ಕೇಂದ್ರವಾಗಿತ್ತು (ನಂತರ ಇದು ಚಳ್ಳಕೆರೆಗೆ ವರ್ಗಾವಣೆಗೊಂಡಿತು). ಇಲ್ಲಿ ತಯಾರಿಸುತ್ತಿದ್ದ ಕಾಗದದ ನಿರ್ದಿಷ್ಟ ಆಕಾರ “ದೊಡ್ಡೇರಿ ಗಜ” ಎಂದೇ ಹೆಸರಾಗಿತ್ತು. ದೊಡ್ಡೇರಿ ಪ್ರಾಮುಖ್ಯತೆ ಪಡೆದ ಒಂದು ಪ್ರಾಚೀನ ಗ್ರಾಮ ಎಂಬುದನ್ನು ಅಲ್ಲಿ ದೊರೆಯುವ ಅವಶೇಷಗಳು ಹೇಳುತ್ತವೆ. ದೊಡ್ಡೇರಿಯ ಗೊಲ್ಲರಹಟ್ಟಿಗೆ ಹೊಂದಿಕೊಂಡಿರುವ ಜಮೀನಿನಲ್ಲಿ ಕನ್ನೇಶ್ವರ ಎಂದು ಕರೆಯಲ್ಪಡುವ ಅತ್ಯಂತ್ಯ ಪ್ರಾಚೀನವಾದ ಲಿಂಗವನ್ನು ನೋಡಬಹುದು. ಇದಕ್ಕೆ 5ನೇ ಶತಮಾನಕ್ಕಿಂತಲೂ ಇತಿಹಾಸವಿದೆ. ದೊಡ್ಡೇರಿ ಕುರುಬರ ಒಂದು ಸಾಂಸ್ಕೃತಿಕ ಕೇಂದ್ರವೂ ಆಗಿದ್ದು, ಇಲ್ಲಿ ರೇವಣಸಿದ್ದೇಶ್ವರನ ಮಠವಿದೆ.
ಗರೀಬ್ ಸಾಬ್ ಮಠ:
ಚಳ್ಳಕೆರೆಯಿಂದ ಪೂರ್ವಕ್ಕೆ ಉಪ್ಪಾರಹಟ್ಟಿಯ ಬಳಿ 6 ಕಿ.ಮೀ. ದೂರದಲ್ಲಿದೆ. ಇದರ ಹೆಸರಿನಲ್ಲಿ ಮಠ ಇದ್ದರೂ ಅಲ್ಲಿ ಯಾವ ಮಠವೂ ಇಲ್ಲ. ಹೆಸರೇ ಹೇಳುವಂತೆ ಸೂಫಿ ಸಂತನೊಬ್ಬನ ಸಮಾಧಿ ಇದು. ಈತನ ಬಗ್ಗೆ ಹೆಚ್ಚಿನ ಮಾಹಿತಿಯೇನೂ ದೊರೆಯದು. ಆದರೆ ಜಾತ್ಯಾತೀತವಾಗಿ ಹಿಂದುಗಳು ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ವರ್ಷಕ್ಕೊಮ್ಮೆ ಬಹುಶಃ ಜನವರಿ ತಿಂಗಳಲ್ಲಿ ಇಲ್ಲಿ ಉರುಸ್ ನಡೆಯುತ್ತದೆ.
(ಆಧಾರ: “ಮ್ಯಾಸಮಂಡಲ” – ಡಾ||ಮೀರಾಸಾಬಿಹಳ್ಳಿ ಶಿವಣ್ಣ)
© 2007 Chitharadurga.com. Best fit for 1024 X 768 Resolution.
Created by Raghavendra.R & Bharatkumar.B.V.