A First Kannada Website of Chitradurga District....... ಕನ್ನಡ ರಾಜ್ಯೋತ್ಸವ ಶುಭಾಷಯಗಳು......  www.chitharadurga.com

ಜಾನಪದ

ಮುಖಪುಟ ಇತಿಹಾಸ ಪ್ರೇಕ್ಷಣೀಯ ಸ್ಥಳಗಳು ಪ್ರಾತಃಸ್ಮರಣೀಯರು ಸಾಹಿತ್ಯ ಜನಪದ ಕಲೆ ಛಾಯಾಗ್ರಹಣ ನಮ್ಮ ಬಗ್ಗೆ
 
ಜನಪದ ಸಾಹಿತ್ಯ
ಜಿಲ್ಲಾ ಬುಡಕಟ್ಟು
ಜಾನಪದ ಕಲೆಗಳು
ಜಾನಪದ ವೀರರು
ಜಾನಪದ ನೆಲೆಗಳು
ಚಳ್ಳಕೆರೆ ತಾಲ್ಲೂಕು
ಗೌರಸಮುದ್ರ ಮಾರಿನೆಲೆ
ದೊಡ್ಡಉಳ್ಳಾರ್ತಿ ಗೌರಮ್ಮ
ಕ್ಯಾತಪ್ಪನ ಪರಿಷೆ
ಚಳ್ಳಕೆರೆಮ್ಮ/ವೀರಭದ್ರಸ್ವಾಮಿ
ಗೋಸಿಕೆರೆ ಸಾರ್ವಡೇಶ್ವರ
ಎತ್ತಪ್ಪನ ಗುಡ್ಡ
ಮತ್ಸಮುದ್ರದ ಉಟ್ಲುಮರ
ಜಗಲೂರಜ್ಜನ ನೆಲೆ/ ದೊಡ್ಡೇರಿ
*******
ಹೊಸದುರ್ಗ ತಾಲ್ಲೂಕು
ಚಿತ್ರದುರ್ಗ ತಾಲ್ಲೂಕು
ಹಿರಿಯೂರು ತಾಲ್ಲೂಕು
ಮೊಳಕಾಲ್ಮೂರು ತಾಲ್ಲೂಕು

ದೊಡ್ಡಉಳ್ಳಾರ್ತಿಯ ಶಕ್ತಿದೇವತೆ ಗೌರಮ್ಮ

            ಚಳ್ಳಕೆರೆಯಿಂದ 13 ಕಿ.ಮೀ ದೂರದಲ್ಲಿದೆ. ಇಲ್ಲಿ ಶಕ್ತಿದೇವತೆಯಾದ ಗೌರಿ ಕೃಷಿ ಸಂಸ್ಕೃತಿಯೊಂದಿಗೆ ತಳಕು ಹಾಕಿಕೊಂಡು (ಹೆಣ್ಣು)ಮಕ್ಕಳ ಗೌರಿಯಾಗಿ ಮೆರೆಯುತ್ತಿದ್ದಾಳೆ. ಈಕೆ ಹಿರಿಯೂರು ತಾಲ್ಲೂಕಿನ ತವಂದಿ ಗ್ರಾಮದಿಂದ ವಲಸೆ ಬಂದವಳು. ದೇವಿಯ ಮೂಲಮೂರ್ತಿ ಗರ್ಭಗುಡಿಯ ಮಧ್ಯದಲ್ಲಿ ಇದ್ದರೆ ಉತ್ಸವಮೂರ್ತಿ ಅದರ ಎಡಪಕ್ಕದ ಮೂಲೆಯಲ್ಲಿ ಖಾಲಿ ರಾಗಿ ಕಣಜದ (ಸೇರು) ಮೇಲೆ ಇರುತ್ತದೆ. ಎರಡು ಕೈಗಳನ್ನು ಮುಂದಕ್ಕೆ ಚಾಚಿದಂತೆ ಕುಳಿತಿರುವ ಗೌರಮ್ಮನ ಮುಖ ಮಾತ್ರ ಕಾಣುತ್ತದೆ. ಮುಖದಿಂದ ಕೆಳಕ್ಕೆ ಸೀರೆ ಉಡಿಸಿರುತ್ತಾರೆ. ವರ್ಷಕ್ಕೊಮ್ಮೆ ಜಾತ್ರೆ ಕಾರ್ತಿಕ ಮಾಸದ ಮೊದಲ ಹುಣ್ಣಿಮೆಯಂದು ಬರುತ್ತದೆ. ಹೀಗಾಗಿ ಆ ಹುಣ್ಣಿಮೆಯನ್ನು ಗೌರಿ ಹುಣ್ಣಿಮೆ ಎಂದು ಕರೆಯುತ್ತಾರೆ. 

        ಇಡೀ ಜಾತ್ರೆ ಒಂದು ಹೆಣ್ಣು ಗಂಡನ ಮನೆಯಿಂದ ತವರು ಮನೆಗೆ ಬಂದು ಮತ್ತು ಹಿಂದಿರುಗುವ ಪ್ರಕ್ರಿಯೆಯ ಸುತ್ತ ನಡೆಯುತ್ತದೆ. ಹೆಣ್ಣಿನ ಜೀವಮಾನದ ಘಟನೆಗಳನ್ನು ಪುನರಭಿನಯಿಸಿದಂತೆ ನಡೆಯುವ ಈ ಪ್ರಕ್ರಿಯೆ ತುಂಬಾ ಕುತೂಹಲಕಾರಿಯಾದುದು. ಮೈಲಾರಲಿಂಗನ ಮನೆಯಿಂದ ಗೌರಿಯನ್ನು ತವರಿಗೆ ತರಲು ಹೋಗುವ ಹಳ್ಳಿಯ ಜನ ಇಡೀ ವರ್ಷದುದ್ದಕ್ಕೂ ಖಾಲಿ ರಾಗಿ ಕಣಜದ ಮೇಲೆ ಕುಂತಿದ್ದ ಉತ್ಸವಮೂರ್ತಿಯನ್ನು ಇಳಿಸಿ ಆನೆ ಮಂಟಪ ಮೇಲೆ ಇರುವ ಕಲಶದ ಮೇಲೆ ಪ್ರತಿಷ್ಟಾಪಿಸುತ್ತಾರೆ. ನಂತರ ಖಾಲಿ ಕಣಜವನ್ನು ರಾಗಿಯಿಂದ ತುಂಬುತ್ತಾರೆ. (ಗೌರಮ್ಮ ತವರಿಗೆ ಬಂದು ಗಂಡನ ಮನೆಗೆ ಹಿಂದಿರುಗಿದ ನಂತರ ಕಣಜದಲ್ಲಿರುವ ರಾಗಿಯನ್ನು ಖಾಲಿ ಮಾಡುತ್ತಾರೆ, ಮತ್ತೇ ಕಣಜಕ್ಕೆ ರಾಗಿ ತುಂಬುವುದು ಮುಂದಿನ ವರ್ಷದ ಉತ್ಸವದ ದಿನವೇ) ಗಂಡ ಮೈಲಾರಲಿಂಗನ ಮನೆಗೆ ಹೋಗುವಾದ ಉತ್ಸವ ಮೂರ್ತಿ ಗೌರಮ್ಮನ ತೋಳು ಕೈ (ಇವು ತೆಗೆದು ಮತ್ತೆ ಜೋಡಿಸುವಂತೆ ಇರುತ್ತದೆ) ತೆಗೆದುಕೊಂಡು ಹೋಗುತ್ತಾರೆ. ಈ ತೋಳು ಕೈಗಳ ಟೊಳ್ಳಿನಲ್ಲಿ ರಾಗಿ ತುಂಬಿರುತ್ತಾರೆ.

         ಗೌರಿಯನ್ನು ಮೈಲಾರಲಿಂಗನ ಗುಡಿಯಲ್ಲಿ, ಸುತ್ತ ತೆರೆ ಕಟ್ಟಿ ನಗ್ನಸ್ಥಿತಿಯಲ್ಲಿರುವ ಆಚಾರಿ (ಅಕ್ಕಸಾಲಿಗ) ಗೋಧಿ, ಅರಿಶಿನ, ಮರಳು, ಮೇಣಗಳನ್ನು ಹಾಲಿನಲ್ಲಿ ನೆನೆಸಿ, ಕೈಗಳನ್ನು ಬೆನ್ನಹಿಂದೆ ಚಾಚಿ ಕಣ್ಣಿನಿಂದ ನೋಡದೆಯೇ ಸುಂದರಮೂರ್ತಿಯನ್ನು ನಿರ್ಮಿಸುತ್ತಾನೆ! ಇದನ್ನು ತವರಿಗೆಂದು ಕರೆಯಲು ಬಂದ ಊರಿನವರೆಗೆ ಒಪ್ಪಿಸಲಾಗುತ್ತದೆ. ವಿಜೃಂಬಣೆಯಿಂದ ಆಕೆಯನ್ನು ತವರಿಗೆಂದು ಕರೆತರುವಾಗ ಹರಕೆ ಮಾಡಿಕೊಂಡ ಹೆಣ್ಣುಮಕ್ಕಳು ದೇವಿಗೆ ಉರುಳು ಸೇವೆ, ಆರತಿ ಸೇವೆ ಮಾಡುತ್ತಾರೆ. ಹೀಗಾಗಿಯೇ ಈ ಉರುಳು, ಮತ್ತು ಆರತಿ, ಸೇರಿ ಉರುಳಾರತಿ, ಉಳ್ಳಾರತಿ, ಉಳ್ಳಾರ್ತಿ ಎಂದು ಈ ಗ್ರಾಮ ನಾಮ ರೂಪುಗೊಂಡಿರಬೇಕು. ತವರಿನಲ್ಲಿ ಒಂದು ದಿನ ಇದ್ದ ಗೌರಮ್ಮ ಗಂಡನ ಮನೆಗೆ ಹೊರಡುತ್ತಾಳೆ. ಈಕೆಯ ಪ್ರತಿಮೆಯನ್ನು ವಿಸರ್ಜಿಸುವುದರೊಂದಿಗೆ ಹಬ್ಬ ಒಂದು ಹಂತದಲ್ಲಿ ಮುಗಿಯುತ್ತದೆ. ನಂತರ ಪುಟ್ಟ ಪುಟ್ಟ ಹೆಣ್ಣುಮಕ್ಕಳು ಸೀರೆಯುಟ್ಟು ಗೌರಮ್ಮನ ಮಕ್ಕಳು ಆಗಿ, ಊರಿಗೆ ಬಂದ ಹೊಸಬರಿಂದ ಕೋಲು ಕೋಲನ್ನ ಪದ ಹಾಡುತ್ತಾ ಹಣ ಪಡೆಯುತ್ತಾರೆ. ಗೌರಿ ಹೆಂಗೆಳೆಯವರ ನಡುವೆ ಸಂಭ್ರಮಿಸುವ ಈ ಬಗೆಯ ಜನಪದ ಸಂಪ್ರದಾಯದ ಹಬ್ಬ ಈ ಜಿಲ್ಲೆಗೆ ವಿಶಿಷ್ಟವಾದುದು.

         ಇಂಥ ವಿಶಿಷ್ಟ ಸಂಪ್ರದಾಯವನ್ನು ನಾವುಗಳು ಕಾಪಾಡಬೇಕಲ್ಲವೇ?


 (ಆಧಾರ: ಮ್ಯಾಸಮಂಡಲ- ಡಾ||ಮೀರಾಸಾಬಿಹಳ್ಳಿ ಶಿವಣ್ಣ)

© 2008 www.chitharadurga.com. Best fit for 1024 X 768 Resolution.

Created by Raghavendra.R & Bharatkumar.B.V.