A First Kannada Website of Chitradurga District....... ಕನ್ನಡ ರಾಜ್ಯೋತ್ಸವ ಶುಭಾಷಯಗಳು......  www.chitharadurga.com

ಜಾನಪದ

ಮುಖಪುಟ ಇತಿಹಾಸ ಪ್ರೇಕ್ಷಣೀಯ ಸ್ಥಳಗಳು ಪ್ರಾತಃಸ್ಮರಣೀಯರು ಸಾಹಿತ್ಯ ಜನಪದ ಕಲೆ ಛಾಯಾಗ್ರಹಣ ನಮ್ಮ ಬಗ್ಗೆ
 
ಜನಪದ ಸಾಹಿತ್ಯ
ಜಿಲ್ಲಾ ಬುಡಕಟ್ಟು
ಜಾನಪದ ಕಲೆಗಳು
ಜಾನಪದ ವೀರರು
ಜಾನಪದ ನೆಲೆಗಳು
ಚಳ್ಳಕೆರೆ ತಾಲ್ಲೂಕು
ಗೌರಸಮುದ್ರ ಮಾರಿನೆಲೆ
ದೊಡ್ಡಉಳ್ಳಾರ್ತಿ ಗೌರಮ್ಮ
ಕ್ಯಾತಪ್ಪನ ಪರಿಷೆ
ಚಳ್ಳಕೆರೆಮ್ಮ/ವೀರಭದ್ರಸ್ವಾಮಿ
ಗೋಸಿಕೆರೆ ಸಾರ್ವಡೇಶ್ವರ
ಎತ್ತಪ್ಪನ ಗುಡ್ಡ
ಮತ್ಸಮುದ್ರದ ಉಟ್ಲುಮರ
ಜಗಲೂರಜ್ಜನ ನೆಲೆ/ ದೊಡ್ಡೇರಿ
*******
ಹೊಸದುರ್ಗ ತಾಲ್ಲೂಕು
ಚಿತ್ರದುರ್ಗ ತಾಲ್ಲೂಕು
ಹಿರಿಯೂರು ತಾಲ್ಲೂಕು
ಮೊಳಕಾಲ್ಮೂರು ತಾಲ್ಲೂಕು

ಗ್ರಾಮದೇವತೆ ಚಳ್ಳಕೆರೆಮ್ಮ

                    ಗ್ರಾಮದೇವತೆ ಚಳ್ಳಕೆರೆಮ್ಮನ ಗುಡಿ ಬಹುಶಃ ಕ್ರಿ.ಶ. 1810ರಲ್ಲಿ ನಿರ್ಮಾಣವಾಗಿರಬಹುದು. ಚಿತ್ರದುರ್ಗ ಪಾಳೆಯಗಾರರ ಅವನತಿಯ ನಂತರ ಕೊನೆಯ ವಂಶಸ್ಥನಾದ ದೊಡ್ಡಮೆದಕೇರಿನಾಯಕ (ಕ್ರಿ.ಶ. 1742-1825) ಚಳ್ಳಕೆರೆಗೆ ಬಂದು ನೆಲೆಸಿದಾಗ, ತಮ್ಮ ಮನೆದೇವತೆಯಾದ ಉತ್ಸವಾಂಬೆಯನ್ನು ತಂದು ಈಗಾಗಲೇ ಇದ್ದಿರಬಹುದಾದ ಶಕ್ತಿಪೀಠವನ್ನು ವಿಸ್ತರಿಸಿ, ದೇವಸ್ಥಾನ ಸ್ಥಾಪಿಸಿದನಂತೆ. ಈಗಾಗಿ ಗ್ರಾಮದೇವತೆಯ ಹಬ್ಬದಲ್ಲಿ ವಿಧವೆಯಾದ ತಾಯಿಗೆ ತಾಳಿಭಾಗ್ಯವನ್ನು ಕೊಡುವ ಸಂಪ್ರದಾಯವನ್ನು ಈಗಲೂ ಇಲ್ಲಿರುವ ಚಿತ್ರದುರ್ಗದ ಪಾಳೆಯಗಾರರ ವಂಶಸ್ಥರೇ ನಿರ್ವಹಿಸಿಕೊಂಡು ಬಂದಿದ್ದಾರೆ. ಐದು ವರ್ಷಕ್ಕೊಮ್ಮೆ ಗ್ರಾಮದೇವತೆಯ ಜಾತ್ರೆಯು ವಿಜೃಂಭಣೆಯಾಗಿ ನಡೆಯುತ್ತದೆ. ಗರ್ಭಗುಡಿಯಲ್ಲಿ ಒಂದು ಸ್ತ್ರೀ ರುಂಡವಿರುವ ವಿಗ್ರಹವನ್ನು ಚಳ್ಳಕೆರೆಮ್ಮನೆಂದು ಪಕ್ಕದಲ್ಲಿಯೇ ನಾಗರಹೆಡೆಯ ಪ್ರಭಾವಳಿ ಇರುವ ಮತ್ತೊಂದು ಸ್ತ್ರೀಯ ವಿಗ್ರಹವನ್ನು ಬಿಡಾರದಮ್ಮ ಎಂದು ಹೇಳುತ್ತಾರೆ.

 

ಚಳ್ಳಕೆರೆಯ ವೀರಭದ್ರಸ್ವಾಮಿ ದೇವಸ್ಥಾನ:

ವೀರಭದ್ರಸ್ವಾಮಿ ಗುಡಿಯನ್ನು ಕಟ್ಟಿಸಿದವರು ಒಬ್ಬ ಮುಸ್ಲಿಂ ಜನಾಂಗದವರು! ಕ್ರಿ.ಶ. 1882ರಲ್ಲಿ ತಾಲ್ಲೂಕು ಕೇಂದ್ರವು ದೊಡ್ಡೇರಿಯಿಂದ ಚಳ್ಳಕೆರೆಗೆ ವರ್ಗಾವಣೆಗೊಂಡಿತು. ಆಗ ತಹಶೀಲ್ದಾರ್ ರವರ ಮನೆ ಈಗಿನ ವೀರಭದ್ರಸ್ವಾಮಿ ಗುಡಿಯ ಬಳಿಯೇ ಇತ್ತು. ದೇವಸ್ಥಾನದಲ್ಲಿ ರಾತ್ರಿ ಬಡೆಯುತ್ತಿದ್ದ ಕರಡಿ ವಾದ್ಯದ ಸದ್ದಿನಿಂದ ಬೇಸತ್ತ ಮುಸ್ಲಿಂ ಅಮಲ್ದಾರ್, ಚಪ್ಪಲಿಗಾಲಿನಲ್ಲಿಯೇ ದೇವಸ್ಥಾನ ಹೊಕ್ಕನು. ಆ ಕರಡಿ ವಾದ್ಯವನ್ನು ಬಡಿಯಕೂಡದೆಂದು ತಾಕೀತು ಮಾಡಿದನು. ಮರುದಿನವೇ ಇವನಿಗೆ ವಾಂತಿ ಬೇಧಿ ಶುರುವಾಗಿ ಹೆದರಿ, ಗುಡಿಸಲು ಗುಡಿಯನ್ನು ತೆಗೆಸಿ, ದೇವಸ್ಥಾನ ಕಟ್ಟಿಸುವ ಹರಕೆ ಮಾಡಿಕೊಂಡ. ಹೀಗಾಗಿ ದೇವಸ್ಥಾನದ ನಿರ್ಮಾಣ ಮಾಡಿಸಿದನು. ಪ್ರತಿ ವರ್ಷ ವೈಶಾಖ ಶುದ್ದದಲ್ಲಿ ಭಾರಿ ದನಗಳ ಜಾತ್ರೆ ನಡೆಯುತ್ತದೆ.


 (ಆಧಾರ: ಮ್ಯಾಸಮಂಡಲ ಡಾ||ಮೀರಾಸಾಬಿಹಳ್ಳಿ ಶಿವಣ್ಣ) 

© 2008 www.chitharadurga.com. Best fit for 1024 X 768 Resolution.

Created by Raghavendra.R & Bharatkumar.B.V.